ಸೈಮಾ ವೇದಿಕೆಯಲ್ಲಿ ದುನಿಯಾ ವಿಜಿ ಕೋಪ ಮಾಡಿಕೊಂಡಿದ್ದು ತಪ್ಪಲ್ಲ: ಜಾಕ್ ಪ್ರತಿಕ್ರಿಯೆ

Updated By: ಮದನ್​ ಕುಮಾರ್​

Updated on: Sep 07, 2025 | 3:23 PM

‘ಭೀಮಾ’ ಚಿತ್ರದಲ್ಲಿ ಹಾಸ್ಯ ಪಾತ್ರ ಮಾಡಿದ ನಟ ಜಾಕ್ (ಪಳನಿ ಸ್ವಾಮಿ) ಅವರಿಗೆ ಸೈಮಾ ಅವಾರ್ಡ್ ಬಂದಿವೆ. ಈ ಅವಾರ್ಡ್ ಫಂಕ್ಷನ್ ಸಮಾರಂಭದ ವೇದಿಕೆಯಲ್ಲಿ ದುನಿಯಾ ವಿಜಯ್ ಅವರು ಕೋಪ ಮಾಡಿಕೊಂಡರು. ಸೈಮಾ ಆಯೋಜಕರ ಬಗ್ಗೆ ವಿಜಯ್ ಕುಮಾರ್ ಅಸಮಾಧಾನ ಹೊರಹಾಕಿದರು. ಅವರ ಕೋಪದಲ್ಲಿ ತಪ್ಪಿಲ್ಲ ಎಂದು ಜಾಕ್ ಹೇಳಿದ್ದಾರೆ.

‘ಭೀಮಾ’ ಸಿನಿಮಾದಲ್ಲಿ ಕಾಮಿಡಿ ಪಾತ್ರ ಮಾಡಿದ ಜಾಕ್ ಅಲಿಯಾಸ್ ಪಳನಿ ಸ್ವಾಮಿ ಅವರಿಗೆ ಸೈಮಾ ಅವಾರ್ಡ್ (SIIMA) ಬಂದಿವೆ. ಈ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ದುನಿಯಾ ವಿಜಯ್ (Duniya Vijay) ಅವರು ಕೋಪ ಮಾಡಿಕೊಂಡರು. ಸೈಮಾ ಆಯೋಜಕರ ಬಗ್ಗೆ ವಿಜಯ್ ಕುಮಾರ್ ಅವರು ಅಸಮಾಧಾನ ಹೊರಹಾಕಿದರು. ಅವರ ಕೋಪದಲ್ಲಿ ತಪ್ಪಿಲ್ಲ ಎಂದು ಜಾಕ್ ಅವರು ಹೇಳಿದ್ದಾರೆ. ‘ಕನ್ನಡದ ಕಲಾವಿದರಿಗೆ ಅವಾರ್ಡ್ ಕೊಡುವಾಗ ಬೇರೆ ಭಾಷೆಯ ನಿರೂಪಕರು ಇದ್ದರು. ಅವರಿಗೆ ನಮ್ಮ ಬಗ್ಗೆ ಏನೂ ಗೊತ್ತಿರಲ್ಲ. ಕನ್ನಡದವರಿಗೆ ಪ್ರಶಸ್ತಿ ಕೊಡುವಾಗ ಜನರು ಕಡಿಮೆ ಆಗಿದ್ದರು. ಅದಕ್ಕಾಗಿ ವಿಜಿ ಅವರಿಗೆ ಕೋಪ ಬಂತು. ಅವರಿಗೆ ಕೋಪ ಬಂದಿದ್ದರಲ್ಲಿ ತಪ್ಪೇನೂ ಇಲ್ಲ’ ಎಂದು ಜಾಕ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.