ಹಾಸನ: ಗ್ರಾಮದೆಲ್ಲೆಡೆ ಕಾಡಾನೆ ಭೀಮನ ಓಡಾಟ, ಜನರಲ್ಲಿ ಆತಂಕ

ಹಾಸನ: ಗ್ರಾಮದೆಲ್ಲೆಡೆ ಕಾಡಾನೆ ಭೀಮನ ಓಡಾಟ, ಜನರಲ್ಲಿ ಆತಂಕ

ಮಂಜುನಾಥ ಕೆಬಿ
| Updated By: ಆಯೇಷಾ ಬಾನು

Updated on: Dec 18, 2023 | 10:14 AM

ಆಲೂರು ತಾಲೂಕಿನ ಅಬ್ಬನ ಗ್ರಾಮದೊಳಗೆ ಕಾಡಾನೆ ಭೀಮ ಪ್ರತ್ಯಕ್ಷನಾಗಿದ್ದಾನೆ. ಹಾಡ ಹಗಲೇ ಗ್ರಾಮದ ಬೀದಿಗಳಲ್ಲಿ ಜನರೆದುರು ರಾಜಗಾಂಭೀರ್ಯ ನಡಿಗೆಯಲ್ಲಿ ಕಾಡಾನೆ ಭೀಮ ಸಾಗಿದ್ದಾನೆ. ಊರಿನ ಒಳಗೆ ಕಾಡಾನೆ ಭೀಮ ಹೆಚ್ಚಾಗಿ ಓಡಾಡುತ್ತಿದ್ದಾನೆ. ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.

ಹಾಸನ, ಡಿ.18: ಇತ್ತೀಚೆಗೆ ಹಾಸನದಲ್ಲಿ ಮೈಸೂರು ದಸರಾ ಆನೆ ಅರ್ಜುನಾ (Elephant Arjuna) ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಕಾಡಾನೆ ಭೀಮ (Bhima) ಊರಿನ ಬೀದಿಗಳಲ್ಲಿ ಓಡಾಡುವ ವಿಡಿಯೋಗಳು ಸೆರೆ ಸಿಕ್ಕಿವೆ. ಆಲೂರು ತಾಲೂಕಿನ ಅಬ್ಬನ ಗ್ರಾಮದೊಳಗೆ ಕಾಡಾನೆ ಭೀಮ ಪ್ರತ್ಯಕ್ಷನಾಗಿದ್ದಾನೆ. ಹಾಡ ಹಗಲೇ ಗ್ರಾಮದ ಬೀದಿಗಳಲ್ಲಿ ಜನರೆದುರು ರಾಜಗಾಂಭೀರ್ಯ ನಡಿಗೆಯಲ್ಲಿ ಕಾಡಾನೆ ಭೀಮ ಸಾಗಿದ್ದಾನೆ. ಊರಿನ ಒಳಗೆ ಕಾಡಾನೆ ಭೀಮ ಹೆಚ್ಚಾಗಿ ಓಡಾಡುತ್ತಿದ್ದಾನೆ. ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.

ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶಾರ್ಪ್ ಶೂಟರ್ ವೆಂಕಟೇಶ್ ಅವರ ಮೇಲೆ ಕಾಡಾನೆ ಭೀಮ ದಾಳಿ ನಡೆಸಿ ಬಲಿ ಪಡೆದಿತ್ತು. ಗಾಯಗೊಂಡು ಓಡಾಡುತ್ತಿದ್ದ ಕಾಡಾನೆ ಭೀಮನಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಶಾರ್ಪ್ ಶೂಟರ್ ವೆಂಕಟೇಶ್ ಮುಂದಾಗಿದ್ದಾಗ ದಾಳಿ ನಡೆಸಿ ಕೊಂದು ಹಾಕಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ