Video: ರೀಲ್ಸ್ ಹುಚ್ಚು, ಓಡಿ ಬಂದು ರೈಲ್ವೆ ಹಳಿ ಮೇಲೆ ಮಲಗೇ ಬಿಟ್ಟ, ರೈಲು ಹೋಗೇಬಿಡ್ತು
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದೆ. ಸ್ವಲ್ಪ ಏರು ಪೇರಾದರೂ ಈ ಅಪಾಯಕಾರಿ ಸ್ಟಂಟ್ಗಳು ಜೀವಕ್ಕೆ ಕುತ್ತು ತಂದುಬಿಡುತ್ತವೆ. ಭುವನೇಶ್ವರದಲ್ಲಿ ಬಾಲಕನೊಬ್ಬ ರೈಲಿನೆದರು ಹುಚ್ಚುತನ ಪ್ರದರ್ಶಿಸಿದ್ದಾನೆ. ರೈಲು ಬರುವ ವೇಳೆ ಓಡಿ ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದಾನೆ. ಮೇಲಿನಿಂದ ರೈಲು ಹೋಗಿದೆ. ಅದೃಷ್ಟವಶಾತ್ ಆತನಿಗೇನೂ ಆಗಿಲ್ಲ. ಆದರೆ ಜೈಲಿನಲ್ಲಿ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ.ಪುರುನಪಾಣಿ ನಿಲ್ದಾಣದ ಬಳಿಯ ದಾಲುಪಲಿ ಬಳಿ ಈ ಘಟನೆ ನಡೆದಿದೆ. ಈ ಅಪಾಯಕಾರಿ ಸ್ಟಂಟ್ ಅನ್ನು ಚಿತ್ರೀಕರಿಸಿದ ಸ್ನೇಹಿತರಿಗೂ ಆಪತ್ತು ಬಂದಿದೆ. ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭುವನೇಶ್ವರ, ಜುಲೈ 07: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದೆ. ಸ್ವಲ್ಪ ಏರು ಪೇರಾದರೂ ಈ ಅಪಾಯಕಾರಿ ಸ್ಟಂಟ್ಗಳು ಜೀವಕ್ಕೆ ಕುತ್ತು ತಂದುಬಿಡುತ್ತವೆ. ಭುವನೇಶ್ವರದಲ್ಲಿ ಬಾಲಕನೊಬ್ಬ ರೈಲಿನೆದರು ಹುಚ್ಚುತನ ಪ್ರದರ್ಶಿಸಿದ್ದಾನೆ. ರೈಲು ಬರುವ ವೇಳೆ ಓಡಿ ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದಾನೆ. ಮೇಲಿನಿಂದ ರೈಲು ಹೋಗಿದೆ. ಅದೃಷ್ಟವಶಾತ್ ಆತನಿಗೇನೂ ಆಗಿಲ್ಲ. ಆದರೆ ಜೈಲಿನಲ್ಲಿ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ.ಪುರುನಪಾಣಿ ನಿಲ್ದಾಣದ ಬಳಿಯ ದಾಲುಪಲಿ ಬಳಿ ಈ ಘಟನೆ ನಡೆದಿದೆ. ಈ ಅಪಾಯಕಾರಿ ಸ್ಟಂಟ್ ಅನ್ನು ಚಿತ್ರೀಕರಿಸಿದ ಸ್ನೇಹಿತರಿಗೂ ಆಪತ್ತು ಬಂದಿದೆ. ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಾಲಕ ಮಾತನಾಡಿ, ನನ್ನ ಸ್ನೇಹಿತರು ಈ ಐಡಿಯಾ ಮಾಡಿದ್ದರು, ಈ ರೀಲ್ಸ್ ಹೆಚ್ಚು ವೈರಲ್ ಆಗಬಹುದೆಂದು ಭಾವಿಸಿದ್ದೆ. ರೈಲು ಹಾದುಹೋಗುವಾಗ ಭಯ ಹೆಚ್ಚಾಗಿತ್ತು. ನಾನು ಬದುಕುತ್ತೇನೆ ಎಂದೆನಿಸಿರಲಿಲ್ಲ ಎಂದಿದ್ದಾನೆ. ರೈಲಿನಲ್ಲಿ ರೀಲ್ಸ್ ಮಾಡಲು ಹೋಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿರುವ ನಿದರ್ಶನಗಳಿವೆ.
ಹಾಗೆಯೇ ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುತ್ತಿರುವಾಗ ರೈಲು ಡಿಕ್ಕಿ ಹೊಡೆದಿರುವ ಸಂದರ್ಭಗಳೂ ಕೂಡ ಇವೆ. ಹಾಗಾಗಿ ಈ ರೀತಿಯ ಅಪಾಯಕಾರಿ ಸ್ಟಂಟ್ಗಳನ್ನು ಮಾಡಿ ಜೀವಕ್ಕೆ ಕುತ್ತು ತಂದುಕೊಳ್ಳಬಾರದು ಎಂಬುದು ನಮ್ಮ ಕಳಕಳಿ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ