ದೆಹಲಿ ಸ್ಫೋಟದ ಸಂತ್ರಸ್ತರಿಗಾಗಿ ಸಾಮೂಹಿಕ ಪ್ರಾರ್ಥನೆ ಮೂಲಕ ಒಗ್ಗಟ್ಟು ಪ್ರದರ್ಶಿಸಿದ ಭೂತಾನ್

Updated on: Nov 11, 2025 | 4:31 PM

ಭೂತಾನ್​ನ ಥಿಂಪುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಂತೆ ದೆಹಲಿ ಸ್ಫೋಟದ ಸಂತ್ರಸ್ತರಿಗಾಗಿ ಭೂತಾನ್‌ನ ರಾಜರ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ದೆಹಲಿಯಲ್ಲಿ 9ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡು ಹಲವಾರು ಜನರನ್ನು ಗಾಯಗೊಳಿಸಿದ ಕೆಂಪು ಕೋಟೆ ಸ್ಫೋಟದ ನಂತರ ಭಾರತಕ್ಕಾಗಿ ಪ್ರಾರ್ಥಿಸುವಂತೆ ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ತಮ್ಮ ದೇಶದ ಜನರ ಬಳಿ ಮನವಿ ಮಾಡಿದ್ದಾರೆ.

ನವದೆಹಲಿ, ನವೆಂಬರ್ 11: ಪ್ರಧಾನಿ ನರೇಂದ್ರ ಮೋದಿ ಭೂತಾನ್​ ಪ್ರವಾಸದಲ್ಲಿದ್ದಾರೆ. ಭೂತಾನ್​ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ (PM Modi) ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಮ್‌ಗ್ಯೆಲ್ ವಾಂಗ್‌ಚುಕ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಥಿಂಪುವಿನ ಚಾಂಗ್ಲಿಮಿಥಾಂಗ್ ಕ್ರೀಡಾಂಗಣದಲ್ಲಿ ದೆಹಲಿ ಸ್ಫೋಟದ ಸಂತ್ರಸ್ತರಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಅಲ್ಲಿ ಸಾವಿರಾರು ಭೂತಾನಿನ ನಾಗರಿಕರು ಒಗ್ಗಟ್ಟಿನಿಂದ ಸೇರಿದ್ದರು.

ದೆಹಲಿಯಲ್ಲಿ 9ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡು ಹಲವಾರು ಜನರನ್ನು ಗಾಯಗೊಳಿಸಿದ ಕೆಂಪು ಕೋಟೆ ಸ್ಫೋಟದ ನಂತರ ಭಾರತಕ್ಕಾಗಿ ಪ್ರಾರ್ಥಿಸುವಂತೆ ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ತಮ್ಮ ದೇಶದ ಜನರ ಬಳಿ ಮನವಿ ಮಾಡಿದ್ದಾರೆ.

ಈ ಭೇಟಿಯ ಸಮಯದಲ್ಲಿ ಮೋದಿ ಅವರು ದೊರೆ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಮತ್ತು ಪ್ರಧಾನಿ ಟೋಬ್‌ಗೇ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅವರು ಜಂಟಿಯಾಗಿ 1,020 ಮೆಗಾವ್ಯಾಟ್ ಪುನತ್‌ಸಂಗ್‌ಚು-II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ