AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರ ಜೈಲಿನ ಉಗ್ರ ಫೋನ್ ಬಳಕೆ, ಏರ್​ಪೋರ್ಟ್​​ ನಮಾಜ್-ದೆಹಲಿ ಸ್ಫೋಟಕ್ಕೂ ಲಿಂಕ್: ಅಶೋಕ್ ಅನುಮಾನ

ಪರಪ್ಪನ ಅಗ್ರಹಾರ ಜೈಲಿನ ಉಗ್ರ ಫೋನ್ ಬಳಕೆ, ಏರ್​ಪೋರ್ಟ್​​ ನಮಾಜ್-ದೆಹಲಿ ಸ್ಫೋಟಕ್ಕೂ ಲಿಂಕ್: ಅಶೋಕ್ ಅನುಮಾನ

ರಮೇಶ್ ಬಿ. ಜವಳಗೇರಾ
|

Updated on:Nov 11, 2025 | 3:31 PM

Share

ದೆಹಲಿಯ ಕೆಂಪುಕೋಟೆ ಬಳಿ ಐ20 ಕಾರು ಸ್ಫೋಟ ಪ್ರಕರಣಕ್ಕೆ ಹಾಗೂ ಕರ್ನಾಟಕದಲ್ಲಿನ ಕೆಲ ಬೆಳವಣಿಗೆಗಳಿಗೆ ಲಿಂಕ್ ಇದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಅಶೋಕ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಉಪಕರಣ ಸೆಟ್ ಮಾಡಿಕೊಂಡಿದ್ದಾನೆ. ಅವನಿಗೆ ದೊಡ್ಡ ಲಿಂಕ್ ಇರಬೇಕು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಸ್ಮಾರ್ಟ್ ಫೋನ್ ಬಳಕೆ, ಏರ್​ಪೋರ್ಟ್​ನಲ್ಲಿ​ ನಮಾಜ್, ದೆಹಲಿ ಸ್ಫೋಟಕ್ಕೂ ಲಿಂಕ್ ಇದೆಯಾ? ಈ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು, (ನವೆಂಬರ್ 11): ದೆಹಲಿಯ ಕೆಂಪುಕೋಟೆ ಬಳಿ ಐ20 ಕಾರು ಸ್ಫೋಟ ಪ್ರಕರಣಕ್ಕೆ ಹಾಗೂ ಕರ್ನಾಟಕದಲ್ಲಿನ ಕೆಲ ಬೆಳವಣಿಗೆಗಳಿಗೆ ಲಿಂಕ್ ಇದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ಜೊತೆ ಮಾತನಾಡಿರುವ ಅಶೋಕ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಉಪಕರಣ ಸೆಟ್ ಮಾಡಿಕೊಂಡಿದ್ದಾನೆ. ಅವನಿಗೆ ದೊಡ್ಡ ಲಿಂಕ್ ಇರಬೇಕು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಸ್ಮಾರ್ಟ್ ಫೋನ್ ಬಳಕೆ, ಏರ್​ಪೋರ್ಟ್​ನಲ್ಲಿ​ ನಮಾಜ್, ದೆಹಲಿ ಸ್ಫೋಟಕ್ಕೂ ಲಿಂಕ್ ಇದೆಯಾ? ಈ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಕರ್ತವ್ಯ ಮಾಡಿದೆ. ಹಾಗೆ ಮಾರ್ಗಸೂಚಿ ನೀಡಿದೆ. ಆದರೆ ರಾಜ್ಯ ಸರ್ಕಾರ ಪಾಲನೆ ಮಾಡಬೇಕಲ್ವಾ?​ ಪೊಲೀಸ್ ಇಲಾಖೆ ಜಸ್ಟ್ ಸುತ್ತೋಲೆ ಹೊರಡಿಸಿದ್ದಾರೆ ಅಷ್ಟೇ. ಗೃಹ ಸಚಿವರು, ಸಿಎಂ ಕಂಟ್ರೋಲ್ ರೂಂ ಪರಿಶೀಲನೆ ಏನೂ ಕಾಣುತ್ತಿಲ್ಲ. ರಾಜ್ಯ ಸರ್ಕಾರ ಪಾಲಿಸದಿದ್ರೆ ಭದ್ರತೆಗೆ ಅಪಾಯದ ಪರಿಸ್ಥಿತಿ ಬರುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.

NIA ಪರಪ್ಪನ ಅಗ್ರಹಾರದಲ್ಲಿರುವ ಉಗ್ರನನ್ನು ವಶಕ್ಕೆ ಪಡೆಯಬೇಕು. ಮೇಲ್ನೋಟಕ್ಕೆ ಇವನ ಮುಖಾಂತರವೇ ಆಗಿದೆ ಅಂತಾ ಅನ್ನಿಸುತ್ತದೆ. ತನಿಖೆಯಿಂದ ಅದು ಬಹಿರಂಗ ಆಗಬೇಕಷ್ಟೇ. ಹಿಂದೆ ಬಡವರಿಗೆ ದುಡ್ಡು ಕೊಟ್ಟು ಉಗ್ರ ಚಟುವಟಿಕೆ ಮಾಡಿಸ್ತಿದ್ದರು. ಈಗ ಹೊಸ ವ್ಯವಸ್ಥೆ, ಹೈಟೆಕ್ ವ್ಯವಸ್ಥೆಗೆ ಉಗ್ರರು ಬಂದಿದ್ದಾರೆ.ನಗರ ನಕ್ಸಲರ ರೀತಿ ಈಗ ಹೈಟೆಕ್ ಟೆರರಿಸ್ಟ್​ಗಳು. ಹೈಟೆಕ್ ಇರುವುದರಿಂದ ಈ ಉಗ್ರರನ್ನು ಹಿಡಿಯುವುದೂ ಕಷ್ಟ. ಪಾಕಿಸ್ತಾನಕ್ಕೆ ನರೇಂದ್ರ ಮೋದಿ, ಬಿಜೆಪಿ ಕಂಡರೆ ಆಗುವುದಿಲ್ಲ. ಪಾಕಿಸ್ತಾನದವರಿಗೆ ಇಲ್ಲಿ ಸಾಫ್ಟ್ ಇರುವವರು ಬರಬೇಕು. ಅದಕ್ಕೆ ಚುನಾವಣೆ ವೇಳೆ ಉಗ್ರ ಚಟುವಟಿಕೆಗಳನ್ನು ಮಾಡುತ್ತಾರೆ ಎಂದರು.

Published on: Nov 11, 2025 03:27 PM