ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ಬಿಚ್ಟಿಟ್ಟ ಡಿಹೆಚ್​​ಒ

Updated on: Apr 22, 2026 | 12:56 PM

ಕರ್ನಾಟಕದಲ್ಲಿ ಇತ್ತೀಚೆಗೆ ವರದಿಯಾದ ಎರಡು ಸಾವುಗಳು ಬಿಸಿಲಿನ ಧಗೆಗೆ ಸಂಬಂಧಿಸಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ಡಿಹೆಚ್‌ಒ ಸ್ಪಷ್ಟಪಡಿಸಿದ್ದಾರೆ. ಬೀದರ್‌ನ ಸಮೀರ್ ಮದ್ಯ ಸೇವನೆ ಮತ್ತು ಅನಾರೋಗ್ಯದಿಂದ ಮೃತಪಟ್ಟರೆ, ಬೆಳಗಾವಿಯ ವೆಂಕಟೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಿಸಿಲು ಸಾವಿಗೆ ಕಾರಣವಲ್ಲ ಎಂದು ಅಧಿಕೃತವಾಗಿ ದೃಢಪಡಿಸಲಾಗಿದೆ.

ಬೀದರ್​​/ಬೆಳಗಾವಿ, ಏಪ್ರಿಲ್​​ 22: ಬೀದರ್ ಜಿಲ್ಲೆಯಲ್ಲಿ 20 ವರ್ಷದ ಯುವಕ ಸಮೀರ್‌ನ ಸಾವಿನ ಕುರಿತು ಆರಂಭದಲ್ಲಿ ಬಿಸಿಲಿನ ಧಗೆ ಕಾರಣ ಎಂದು ವರದಿಯಾಗಿತ್ತು. ಅದೇ ರೀತಿ ಬೆಳಗಾವಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ವೆಂಕಟೇಶ್ ಅವರ ಸಾವಿಗೂ ಬಿಸಿಲೇ ಕಾರಣ ಎನ್ನಲಾಗಿತ್ತು. ಆದರೆ, ಈ ಎರಡೂ ಪ್ರಕರಣಗಳ ಬಗ್ಗೆ ಡಿಹೆಚ್‌ಒ ಅವರು ಸ್ಪಷ್ಟನೆ ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಸಮೀರ್ ಬಿಸಿಲಿನಿಂದ ಮೃತಪಟ್ಟಿಲ್ಲ. ಅವರು ಮದ್ಯ ಸೇವಿಸುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದರು. ಇನ್ನು, ಬೆಳಗಾವಿಯ ವೆಂಕಟೇಶ್ ಅವರು ಕೂಡ ಬಿಸಿಲಿನಿಂದ ನಿಧನರಾಗಿಲ್ಲ. ಅವರಿಗೆ ಹೃದಯಾಘಾತ ಸಂಭವಿಸಿತ್ತು, ಅದರಿಂದಲೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Apr 22, 2026 12:55 PM
Follow Us
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More