ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಕಣ್ಣಿರಿಟ್ಟ ಸ್ವಾಮೀಜಿ, ಸರ್ಕಾರದ ನಡೆಗೆ ಬೇಸರ

Updated By: ರಮೇಶ್ ಬಿ. ಜವಳಗೇರಾ

Updated on: Aug 21, 2025 | 10:53 PM

ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಸ್ವಾಮೀಜಿಯೊಬ್ಬರು ಕಣ್ಣಿರಿಟ್ಟ ಪ್ರಸಂಗ ನಡೆದಿದೆ. ಕಲಬುರಗಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಬೀದರ್ ನ ಬೇಮಳಖೇಡದ ಡಾ.ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ವೀರಶೈವ-ಲಿಂಗಾಯತ ಅಧ್ಯಯನ ಪೀಠ ಸಂಬಂಧ ಕಣ್ಣೀರು ಹಾಕಿದರು. ಕಳೆದ ಹತ್ತು ವರ್ಷಗಳಿಂದ ಅಧ್ಯಯನ ಪೀಠಕ್ಕಾಗಿ ಹೋರಾಟ ಮಾಡುತ್ತಿದ್ದೆವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ‌. ಸರ್ಕಾರದ ಮಟ್ಟದಲ್ಲಿ ಒಂದು ಅಧ್ಯಯನ ಪೀಠ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿಲ್ಲ‌. ನಮ್ಮ ಧರ್ಮ, ನಮ್ಮ ಪರಂಪರೆ ತಿಳಿಸಲು ನಮಗೆ ಅಧ್ಯಯನ ಪೀಠ ಬೇಕು. ಕೊನೆ ಪಕ್ಷ ಕಲಬುರಗಿ ಕೇಂದ್ರೀಯ ವಿವಿಯಲ್ಲಾದ್ರು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು. ನಮಗೆ ಯಾರು ಕೇಳುವವರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಲಬುರಗಿ, (ಆಗಸ್ಟ್ 21): ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಸ್ವಾಮೀಜಿಯೊಬ್ಬರು ಕಣ್ಣಿರಿಟ್ಟ ಪ್ರಸಂಗ ನಡೆದಿದೆ. ಕಲಬುರಗಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಬೀದರ್ ನ ಬೇಮಳಖೇಡದ ಡಾ.ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ವೀರಶೈವ-ಲಿಂಗಾಯತ ಅಧ್ಯಯನ ಪೀಠ ಸಂಬಂಧ ಕಣ್ಣೀರು ಹಾಕಿದರು. ಕಳೆದ ಹತ್ತು ವರ್ಷಗಳಿಂದ ಅಧ್ಯಯನ ಪೀಠಕ್ಕಾಗಿ ಹೋರಾಟ ಮಾಡುತ್ತಿದ್ದೆವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ‌. ಸರ್ಕಾರದ ಮಟ್ಟದಲ್ಲಿ ಒಂದು ಅಧ್ಯಯನ ಪೀಠ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿಲ್ಲ‌. ನಮ್ಮ ಧರ್ಮ, ನಮ್ಮ ಪರಂಪರೆ ತಿಳಿಸಲು ನಮಗೆ ಅಧ್ಯಯನ ಪೀಠ ಬೇಕು. ಕೊನೆ ಪಕ್ಷ ಕಲಬುರಗಿ ಕೇಂದ್ರೀಯ ವಿವಿಯಲ್ಲಾದ್ರು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು. ನಮಗೆ ಯಾರು ಕೇಳುವವರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದವರೂ ನಮಗೆ ಭಿಕ್ಷೆ ಹಾಕ್ತಿದ್ದಿರಾ? ಒಂದು ಅಧ್ಯಯನ ಪೀಠ ಮಾಡೋಕ್ಕೆ ಆಗುತ್ತಿಲ್ಲ. ಎಲ್ಲಾ ರಾಜಕಾರಣಿಗಳಿಗೆ ವೀರಶೈವ ಧರ್ಮ ತಾಯಿ ಇದ್ದಂತೆ. ಈಗ ವೀರಶೈವ ಧರ್ಮಕ್ಕೆ ಅನ್ಯಾಯವಾಗುತ್ತಿದೆ. ನಮ್ಮ ಸಮುದಾಯದವರೆಲ್ಲ ಒಂದಾಗಿ ಅಧ್ಯಯನ ಪೀಠಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.