ಬೀದರ್ ಶೂಟೌಟ್ ಪ್ರಕರಣ: ರಾಜ್ಯದ ಕಾನೂನು ಸುವ್ಯವಸ್ಥೆ ನಾಗರಿಕ ಸಮಾಜವನ್ನು ಆತಂಕಕ್ಕೀಡು ಮಾಡಿದೆ
ಎಟಿಎಂಗಳನ್ನು ಸ್ಥಾಪಿಸುವಾಗ ಮತ್ತು ಅವಗಳಲ್ಲಿ ನಗದನ್ನು ತುಂಬಲು ಹಣವನ್ನು ಸಾಗಿಸುವಾಗ ಅನುಸರಿಸಬೇಕಾದ ಗೈಡ್ ಲೈನ್ ಗಳ ಬಗ್ಗೆ ಗೃಹ ಇಲಾಖೆ ನೀಡುವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್ಗಳನ್ನು ಬಗ್ಗೆ ಪರಮೇಶ್ವರ್ ಮಾತಾಡುತ್ತಾರೆ. ಆದರೆ ನಡೆದುಹೋಗಿರುವ ಅಚಾತುರ್ಯ, ಜೀವ ಕಳೆದುಕೊಂಡ ಗಾರ್ಡ್ಗಳು, ಅವರ ಕುಟುಂಬಗಳ ಬಗ್ಗೆ ಅವರು ಮಾತಾಡಲ್ಲ. ಸರ್ಕಾರ ಸಂವೇದಾನಾನಶೀಲತೆಯನ್ನೂ ಕಳೆದುಕೊಂಡಿದೆಯೇ?
ಬೆಂಂಗಳೂರು: ತಮ್ಮ ಇಲಾಖೆಯ ಸಮರ್ಥನೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಏನೇ ಹೇಳಿದರೂ ರಾಜ್ಯದಲ್ಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಅಲ್ಲಗಳೆಯಲಾಗದು. ಬೀದರ್ ನಲ್ಲಿ ಇವತ್ತು ಹಾಡುಗಗಲೇ ಮತ್ತು ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನಡೆದಿರುವ ಶೂಟೌಟ್ ಪ್ರಕರಣ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸುತ್ತದೆ. ಎಟಿಎಂಗಳಿಗೆ ನಗದು ತುಂಬುವ ವಾಹನವನ್ನು ಬೈಕ್ ಮೇಲೆ ಫಾಲೋ ಮಾಡುತ್ತ ಬಂದ ಇಬ್ಬರು ಹೆಲ್ಮೆಟ್ ಧಾರಿಗಳು ಕ್ಯಾಶ್ ವ್ಯಾನ್ನಲ್ಲಿದ್ದ ಇಬ್ಬರು ಗಾರ್ಡ್ಗಳ ಮೇಲೆ ಗುಂಡು ಹಾರಿಸಿ ₹ 93 ಲಕ್ಷ ನಗದಿನೊಂದಿಗೆ ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಒಬ್ಬ ಗಾರ್ಡ್ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಗಾರ್ಡ್ ಶಿವಕುಮಾರ್ ಬಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೀದರ್: ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು