AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗದಲ್ಲಿ ಅಪರೂಪದ ಬೃಹತ್ ಗಾತ್ರದ ಅಣಬೆ ಪತ್ತೆ, ಇದರ ಎತ್ತರ, ತೂಕ ಎಷ್ಟಿದೆ ಗೊತ್ತಾ?

ಚಿತ್ರದುರ್ಗದಲ್ಲಿ ಅಪರೂಪದ ಬೃಹತ್ ಗಾತ್ರದ ಅಣಬೆ ಪತ್ತೆ, ಇದರ ಎತ್ತರ, ತೂಕ ಎಷ್ಟಿದೆ ಗೊತ್ತಾ?

ರಮೇಶ್ ಬಿ. ಜವಳಗೇರಾ
|

Updated on:Sep 01, 2024 | 6:49 PM

Share

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಯಾಪುರ ಗ್ರಾಮದಲ್ಲಿ ಅಪರೂಪದ ಬೃಹತ್ ಗಾತ್ರದ ಅಣಬೆ ಪತ್ತೆಯಾಗಿದೆ. ಇದನ್ನು ನೋಡಿ ಜನರು ಅಚ್ಚರಿಯಾಗಿದ್ದಾರೆ. ಹಾಗಾದ್ರೆ, ಈ ಅಣಬೆಯ ಎತ್ತರ ಮತ್ತು ತೂಕ ಎಷ್ಟಿದೆ ಎನ್ನುವ ವಿವರ ಇಲ್ಲಿದೆ ನೋಡಿ.

ಚಿತ್ರದುರ್ಗ, (ಸೆಪ್ಟೆಂಬರ್ 01): ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಾಪುರ ಗ್ರಾಮದಲ್ಲಿ ಅಪರೂಪದ ಬೃಹತ್ ಗಾತ್ರದ ಅಣಬೆ ಪತ್ತೆಯಾಗಿದೆ. ಪ್ರಕಾಶ ಎಂಬ ರೈತನಿಗೆ ಈ ಅಪರೂಪದ ಬೃಹತ್ ಅಣಬೆ ಸಿಕ್ಕಿದ್ದು, ಕಾಡುಜಾತಿಯ ಈ ಅಣಬೆ 1ಅಡಿ ಅಗಲ, 1 ಅಡಿ ಎತ್ತರ, 5ಕೆಜಿ ತೂಕವಿದೆ. ಉತ್ತಮ ಮಳೆ ಸುರಿದ ಪರಿಣಾಮ ಬೃಹತ್ ಬಿಳಿ ಛತ್ರಿಯಂತೆ ಅಣಬೆ ಬೆಳೆದಿದೆ. ಈ ಅಣಬೆಯನ್ನು ನೋಡಿ ಜನರು ಅಚ್ಚರಿಯಾಗಿದ್ದಾರೆ. ಇದೀಗ ಈ ಅಪರೂಪದ ಅಣಬೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Published on: Sep 01, 2024 06:45 PM

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More