ಕಿಚ್ಚ ಸುದೀಪ್ ಹುಟ್ಟುಹಬ್ಬದ ಸೆಲೆಬ್ರೇಷನ್ಗೆ ಭರ್ಜರಿಯಾಗಿ ನಡೆದಿದೆ ಫ್ಯಾನ್ಸ್ ತಯಾರಿ
ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಈ ವರ್ಷ ಭರ್ಜರಿಯಾಗಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ ಸಕಲ ತಯಾರಿ ನಡೆದಿದೆ. ಆ ಬಗ್ಗೆ ಸುದೀಪ್ ಫ್ಯಾನ್ಸ್ ಮಾತನಾಡಿದ್ದಾರೆ. ರಾಜ್ಯದ ಬೇರೆ ಬೇರೆ ಊರುಗಳಿಂದ ಬರುವ ಅಭಿಮಾನಿಗಳು ಸುದೀಪ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ.
ಮನೆಯ ಬಳಿ ಹುಟ್ಟುಹಬ್ಬ ಆಚರಣೆ ಮಾಡಿದರೆ ನೆರೆಹೊರೆಯವರಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಈ ಬಾರಿ ಮೈದಾನದಲ್ಲಿ ಆಚರಣೆ ಮಾಡಲು ಕಿಚ್ಚ ಸುದೀಪ್ ತೀರ್ಮಾನಿಸಿದ್ದಾರೆ. ಸೆಪ್ಟೆಂಬರ್ 2ರಂದು ಜಯನಗರದ ಎಂಇಎಸ್ ಗ್ರೌಂಡ್ನಲ್ಲಿ ಅವರು ಫ್ಯಾನ್ಸ್ ಜೊತೆ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಳ್ಳಲಿದ್ದಾರೆ. ತಯಾರಿ ಹೇಗೆ ನಡೆದಿದೆ ಎಂಬ ಬಗ್ಗೆ ಮಾಹಿತಿ ನೀಡುವ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos