AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರು ಮಕ್ಕಳನ್ನ ಕೊಂದು ತಾಯಿಯೂ ನೇಣಿಗೆ ಶರಣು: ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಕಾರಣ ಬಯಲು

ಇಬ್ಬರು ಮಕ್ಕಳನ್ನ ಕೊಂದು ತಾಯಿಯೂ ನೇಣಿಗೆ ಶರಣು: ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಕಾರಣ ಬಯಲು

ರಮೇಶ್ ಬಿ. ಜವಳಗೇರಾ
|

Updated on: Oct 28, 2025 | 7:24 PM

Share

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆನಕಲ್ ಗ್ರಾಮದಲ್ಲಿ ಇದೇ ಅಕ್ಟೋಬರ್ 27ರಂದು ಇಬ್ಬರು ಮಕ್ಕಳನ್ನ ಕೊಂದು (Murder) ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕುಟುಂಬ ಕಲಹದಿಂದಾಗಿ ಮಹಿಳೆ ಈ ನಿರ್ಧಾರ ಮಾಡಿರಬಹುದೆಂದು ಮೊದಲು ಶಂಕಿಸಲಾಗಿತ್ತಾದರೂ ಪೊಲೀಸ್​ ತನಿಖೆ ವೇಳೆ ಸ್ಫೋಟಕ ಸತ್ಯ ಹೊರಬಿದ್ದಿದೆ. ಪ್ರಕರಣದ ಹಿಂದೆ ಅಕ್ರಮ ಸಂಬಂಧದ ಕರಾಳ ಮುಖ ಇರುವುದು ಬಟಾಬಯಲಾಗಿದ್ದು, ತಾಯಿಯ ತಪ್ಪಿಗೆ ಅಮಾಯಕ ಇಬ್ಬರು ಮಕ್ಕಳೂ ಬಲಿಯಾಗಿವೆ.

ಕೊಪ್ಪಳ, (ಅಕ್ಟೋಬರ್​ 28): ಜಿಲ್ಲೆಯ ಕುಕನೂರು ತಾಲೂಕಿನ ಬೆನಕಲ್ ಗ್ರಾಮದಲ್ಲಿ ಇದೇ ಅಕ್ಟೋಬರ್ 27ರಂದು ಇಬ್ಬರು ಮಕ್ಕಳನ್ನ ಕೊಂದು (Murder) ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕುಟುಂಬ ಕಲಹದಿಂದಾಗಿ ಮಹಿಳೆ ಈ ನಿರ್ಧಾರ ಮಾಡಿರಬಹುದೆಂದು ಮೊದಲು ಶಂಕಿಸಲಾಗಿತ್ತಾದರೂ ಪೊಲೀಸ್​ ತನಿಖೆ ವೇಳೆ ಸ್ಫೋಟಕ ಸತ್ಯ ಹೊರಬಿದ್ದಿದೆ. ಪ್ರಕರಣದ ಹಿಂದೆ ಅಕ್ರಮ ಸಂಬಂಧದ ಕರಾಳ ಮುಖ ಇರುವುದು ಬಟಾಬಯಲಾಗಿದ್ದು, ತಾಯಿಯ ತಪ್ಪಿಗೆ ಅಮಾಯಕ ಇಬ್ಬರು ಮಕ್ಕಳೂ ಬಲಿಯಾಗಿವೆ. ಇನ್ನು ಮಕ್ಕಳಾದ ರಮೇಶ್​(4), ಜಾನು(2) ನೇಣಿಗೆ ಹಾಕಿ ಕೊಂದು ಬಳಿಕ ತಾಯಿ ಲಕ್ಷ್ಮವ್ವ ಸಹ ನೇಣಿಗೆ ಶರಣಾಗಿದ್ದಳು. ಆದರಂಭದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾರೆ.