ಕೊಪ್ಪಳದ ಗವಿಸಿದ್ದಪ್ಪ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್: ಬಾಲಕಿ ಪೋಷಕರಿಂದ ಗಂಭೀರ ಆರೋಪ
ಕೊಪ್ಪಳ ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ನಡೆದಿದ್ದ ಗವಿಸಿದ್ದಪ್ಪ (Gavisiddappa Murder Case) ನಾಯಕ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕ ಸಾದಿಕ್ ಕೋಲ್ಕಾರ್ ಎನ್ನುವಾತ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದು, ಈ ಸಂಬಂಧ ಪೊಲೀಸರು ಈಗಾಗಲೇ ಹಂತಕ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರ ಮಧ್ಯೆ ಇದೀಗ ಬಾಲಕಿ ಪೋಷಕರು ಪ್ರತ್ಯಕ್ಷರಾಗಿದ್ದು, ಹತ್ಯೆಯಾದ ಗವಿ ಸಿದ್ದಪ್ಪ ನನ್ನ ಮಗಳನ್ನ ಅತ್ಯಾಚಾರ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪಳ, (ಆಗಸ್ಟ್ 14): ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ನಡೆದಿದ್ದ ಗವಿಸಿದ್ದಪ್ಪ (Gavisiddappa Murder Case) ನಾಯಕ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕ ಸಾದಿಕ್ ಕೋಲ್ಕಾರ್ ಎನ್ನುವಾತ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದು, ಈ ಸಂಬಂಧ ಪೊಲೀಸರು ಈಗಾಗಲೇ ಹಂತಕ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರ ಮಧ್ಯೆ ಇದೀಗ ಬಾಲಕಿ ಪೋಷಕರು ಪ್ರತ್ಯಕ್ಷರಾಗಿದ್ದು, ಹತ್ಯೆಯಾದ ಗವಿ ಸಿದ್ದಪ್ಪ ನನ್ನ ಮಗಳನ್ನ ಅತ್ಯಾಚಾರ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂಬೇಡ್ಕರ್, ಬಾಲಕಿ ಪೋಷಕರು, ಗಾಂಧಿಜೀ ಭಾವಚಿತ್ರದೊಂದಿಗೆ ಧರಣಿ ನಡೆಸಿದ್ದು, ಹತ್ಯೆಯಾದ ಗವಿ ಸಿದ್ದಪ್ಪ ನನ್ನ ಮಗಳನ್ನ ಅತ್ಯಾಚಾರ ಮಾಡಿದ್ದಾನೆ. ಟಾರ್ಚರ್ ಕೊಟ್ಟಿದ್ದಾನೆ. ಮಗಳಿಗೆ ಇನ್ನು 17 ವರ್ಷ,ಅವನಿಗೆ 27 ವರ್ಷ. ಇಬ್ಬರ ಮದ್ಯೆ ಹೇಗೆ ಲವ್ ಆಗತ್ತೆ? ಕೊಲೆಗೂ ನನ್ನ ಮಗಳಿಗೆ ಯಾವುದೇ ಸಂಬಂಧ ಇಲ್ಲ . ನಮ್ಮ ಹುಡಗಿಗೆ ಒಂದೂವರೆ ವರ್ಷದಿಂದ ಕಿರಿಕಿರಿ ಮಾಡುತ್ತಿದ್ದ. ಈ ಬಗ್ಗೆ ದೂರು ಕೊಡದಂತೆ ಬೆದರಿಕೆ ಹಾಕಿದ್ದ. ಗವಿ ಸಿದ್ದಪ್ಪ,ಅಷ್ಟೆ ಅಲ್ಲ ಅವರ ಪೋಷಕರು ಬೆದರಿಕೆ ಹಾಕಿದ್ದರು ಎಂದು ಬಾಲಕಿ ಪೋಷಕರು ಆರೋಪಿಸಿದ್ದು, ನ್ಯಾಯಬೇಕೆಂದು ಆಗ್ರಹಿಸಿದ್ದಾರೆ.