ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ

|

Updated on: Jan 24, 2025 | 8:19 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯಲಿದ್ದು, ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ. ಹೀಗಿರುವಾಗಲೇ ಸಾಮಾನ್ಯ ಪ್ರಸಾರ ಸಮಯಕ್ಕೂ ಬಿಗ್ ಬಾಸ್ ಫಿನಾಲೆ ಸಮಯಕ್ಕೂ ಬದಲಾವಣೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಶನಿವಾರ (ಜನವರಿ 25) ಹಾಗೂ ಭಾನುವಾರ (ಜನವರಿ 26) ಫಿನಾಲೆ ನಡೆಯಲಿದೆ. ಪ್ರತಿ ದಿನ ಎಪಿಸೋಡ್ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿತ್ತು. ವೀಕೆಂಡ್ ಎಪಿಸೋಡ್ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತಿತ್ತು. ಆದರೆ, ಫಿನಾಲೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಯಿಂದ ಫಿನಾಲೆ ಪ್ರಸಾರ ಆರಂಭ ಆಗಲಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ವೀಕ್ಷಿಸಬಹುದು.  ಪ್ರೋಮೋ ಮೂಲಕ ಈ ಮಾಹಿತಿ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.