ರಕ್ಷಿತಾ ಶೆಟ್ಟಿಗೆ ಕನ್ನಡ ಬರಲ್ಲ ಅನ್ನೋದು ನಾಟಕನಾ? ಧ್ರುವಂತ್ ಆರೋಪಕ್ಕೆ ಚಂದ್ರಪ್ರಭ ಉತ್ತರ
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿರುವ ಚಂದ್ರಪ್ರಭ ಅವರು ನೀಡಿದ ಸಂದರ್ಶನ ಇಲ್ಲಿದೆ. ರಕ್ಷಿತಾ ಶೆಟ್ಟಿ ಮೇಲೆ ಧ್ರುವಂತ್ ಅವರು ಕೆಲವು ಆರೋಗಳನ್ನು ಮಾಡಿದ್ದು, ಆ ಬಗ್ಗೆ ಬಹಳ ಚರ್ಚೆ ಆಗಿದೆ. ಆ ವಿಷಯದ ಕುರಿತ ಪ್ರಶ್ನೆಗೆ ಚಂದ್ರಪ್ರಭ ಅವರು ಉತ್ತರ ನೀಡಿದ್ದಾರೆ. ಟಿವಿ9 ಜೊತೆ ಅವರು ಮಾತಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಿಂದ ಚಂದ್ರಪ್ರಭ ಅವರು ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಟಿವಿ9 ಜೊತೆ ಅವರು ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯ ಹಲವು ಸದಸ್ಯರ ಬಗ್ಗೆ ತಮ್ಮ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ರಕ್ಷಿತಾ ಶೆಟ್ಟಿ (Rakshitha Shetty) ಅವರ ಭಾಷೆಯ ಬಗ್ಗೆ ಚರ್ಚೆ ನಡೆದಿತ್ತು. ರಕ್ಷಿತಾ ಶೆಟ್ಟಿ ಅವರು ಕನ್ನಡ ಬರಲ್ಲ ಅಂತ ಹೇಳಿರುವುದರ ಬಗ್ಗೆ ಧ್ರುವಂತ್ ಅನುಮಾನ ವ್ಯಕ್ತಪಡಿಸಿದ್ದರು. ಆ ಕುರಿತು ಚಂದ್ರಪ್ರಭ ಅವರ ಕೂಡ ಅಭಿಪ್ರಾಯ ತಿಳಿಸಿದ್ದಾರೆ. ‘ರಕ್ಷಿತಾ ಶೆಟ್ಟಿ ಅವರು ಮುಂಬೈನಲ್ಲಿ ಹುಟ್ಟಿ ಬೆಳೆದ ಕಾರಣ ಅವರ ಕನ್ನಡ ಆ ರೀತಿ ಇದೆ’ ಎಂದು ಚಂದ್ರಪ್ರಭ (Chandraprabha) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
