ಗೆಳೆಯನ ‘ಮಂಡ್ಯ ಹೈದ’ ಟ್ರೈಲರ್ ವೀಕ್ಷಿಸಿ ಕೊಂಡಾಡಿದ ಬಿಗ್​ಬಾಸ್ ವಿಜೇತ ಕಾರ್ತಿಕ್

ಗೆಳೆಯನ ‘ಮಂಡ್ಯ ಹೈದ’ ಟ್ರೈಲರ್ ವೀಕ್ಷಿಸಿ ಕೊಂಡಾಡಿದ ಬಿಗ್​ಬಾಸ್ ವಿಜೇತ ಕಾರ್ತಿಕ್

Updated on: Feb 02, 2024 | 10:12 PM

Karthik Mahesh: ಬಿಗ್​ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ‘ಮಂಡ್ಯ ಹೈದ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 10ರ (BiggBoss) ವಿಜೇತ ಕಾರ್ತಿಕ್ ಮಹೇಶ್, ಬಿಗ್​ಬಾಸ್​ನಿಂದ ಹೊರ ಬಂದ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ. ಸರಣಿ ಸಂದರ್ಶನಗಳನ್ನು ನೀಡುತ್ತಿರುವ ಕಾರ್ತಿಕ್, ಕೆಲವು ಸಿನಿಮಾಗಳ ಕಾರ್ಯಕ್ರಮಗಳಿಗೂ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅಭಯ್ ಚಂದ್ರ ನಟಿಸಿರುವ ‘ಮಂಡ್ಯ ಹೈದ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾರ್ತಿಕ್ ಮಹೇಶ್ ಭಾಗವಹಿಸಿದ್ದರು. ಟ್ರೈಲರ್ ವೀಕ್ಷಿಸಿ ಖುಷಿ ಪಟ್ಟ ಕಾರ್ತಿಕ್ ಮಹೇಶ್, ಟ್ರೈಲರ್​ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅಭಯ್ ಚಂದ್ರ ಅವರಿಗೆ ಮಾಸ್ ಹೀರೋ ಆಗುವ ಎಲ್ಲ ಲಕ್ಷಣಗಳೂ ಇವೆ ಎಂದಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡಿರುವ ಥ್ರಿಲ್ಲರ್ ಮಂಜು ಅವರನ್ನು ಕೊಂಡಾಡಿದ ಕಾರ್ತಿಕ್, ಸಿನಿಮಾದ ನಿರ್ದೇಶಕ, ನಿರ್ಮಾಪಕರಿಗೂ ಶುಭ ಹಾರೈಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More