ಬಾಡಿಗೆ ಮನೆಯಲ್ಲಿದ್ದೇನೆ, ಬಿಗ್ ಬಾಸ್ ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮಕ್ಕೆ ಇತ್ತೀಚೆಗೆ ತೆರೆ ಬಿತ್ತು. ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಪ್ರಶ್ನೆ ವೀಕ್ಷಕರ ಮನದಲ್ಲಿ ಕೊರೆಯುತ್ತಿದೆ. ಯಾರೂ ಕೂಡ ಪಕ್ಕಾ ಲೆಕ್ಕವನ್ನು ಹೇಳುತ್ತಿಲ್ಲ. ತ್ರಿವಿಕ್ರಮ್ ಅವರಿಗೆ ಸಂಭಾವನೆ ಹೊರತುಪಡಿಸಿ ಬಹುಮಾನದ ಮೊತ್ತವಾಗಿ 15 ಲಕ್ಷ ರೂಪಾಯಿ ಕೂಡ ಸಿಕ್ಕಿತು. ಈ ಎಲ್ಲ ವಿಚಾರಗಳ ಬಗ್ಗೆ ತ್ರಿವಿಕ್ರಮ್ ಅವರು ಮಾತಾಡಿದ್ದಾರೆ.
ಬಿಗ್ ಬಾಸ್ ಶೋ ಮುಗಿದ ಬಳಿಕ ತ್ರಿವಿಕ್ರಮ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಸಿಕ್ಕಿರುವ ಸಂಭಾವನೆ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ ಶೋಗೆ ಹೋಗುವುದಕ್ಕೂ ಮುನ್ನ ತ್ರಿವಿಕ್ರಮ್ ಅವರಿಗೆ ಹೆಚ್ಚಿನ ಆಫರ್ಗಳು ಇರಲಿಲ್ಲ. ಹಾಗಾಗಿ ಸಾಲ ಮಾಡಿಕೊಂಡಿದ್ದರು. ಈಗಲೂ ಅವರು ಬಾಡಿಗೆ ಮನೆಯಲ್ಲಿ ಇದ್ದಾರೆ. ಬಿಗ್ ಬಾಸ್ನಿಂದ ಬಂದ ಸಂಭಾವನೆಯಲ್ಲಿ ಸಾಲ ತೀರಿಸುವುದಾಗಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.