ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್​; ಭವ್ಯಾ, ಐಶ್ವರ್ಯಾ ಪರದಾಟ

|

Updated on: Dec 20, 2024 | 3:26 PM

ಬಿಗ್ ಬಾಸ್ ಮನೆಯಲ್ಲಿ ಕಷ್ಟದ ಟಾಸ್ಕ್​ ನೀಡಲಾಗಿದೆ. ಕ್ಯಾಪ್ಟನ್ ಆಗಬೇಕು ಎಂದು ಕನಸು ಇಟ್ಟುಕೊಂಡಿರುವವರು ಈ ಟಾಸ್ಕ್​ ಆಡಿದ್ದಾರೆ. ಆದರೆ ಟಾಸ್ಕ್​ ಪೂರ್ಣಗೊಳಿಸಲು ಭವ್ಯಾ ಗೌಡ ಮತ್ತು ಐಶ್ವರ್ಯಾ ಸಿಂಧೋಗಿ ಅವರು ಕಷ್ಟಪಟ್ಟಿದ್ದಾರೆ. ಡಿಸೆಂಬರ್​ 20ರ ಸಂಚಿಕೆಯ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಸ್ಪರ್ಧಿಗಳಿಗೆ ಬಿಗ್ ಬಾಸ್​ ಮನೆಯಲ್ಲಿ ದಿನದಿಂದ ದಿನಕ್ಕೆ ಕಷ್ಟ ಹೆಚ್ಚಿದೆ. ಇನ್ನು ಈ ಆಟದಲ್ಲಿ ಉಳಿದಿರುವುದು ಕೆಲವೇ ದಿನಗಳು ಮಾತ್ರ. ಫಿನಾಲೆ ಸಮೀಪದಲ್ಲಿ ಕ್ಯಾಪ್ಟನ್ ಆಗಲು ಐಶ್ವರ್ಯಾ, ಭವ್ಯಾ ಗೌಡ ಮುಂತಾದವರು ಕಷ್ಟಪಡುತ್ತಿದ್ದಾರೆ. ಆದರೆ ಕ್ಯಾಪ್ಟೆನ್ಸಿ ಟಾಸ್ಕ್​ ಬಹಳ ಟ್ರಿಕ್ಕಿ ಆಗಿದೆ. ‘ಇದು ಅದೃಷ್ಟದ ಆಟ. ಅಂದಾಜಿನ ಮೇಲೆ ಇಡಬೇಕು’ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಅದರ ಪ್ರೋಮೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.