ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ; ವಿಡಿಯೋ ವೈರಲ್

ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ; ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on:Dec 20, 2024 | 4:47 PM

ಪುಣೆಯಲ್ಲಿ ಚಲಿಸುತ್ತಿದ್ದ ಬಸ್​ನಲ್ಲಿ ತನಗೆ ಕಿರುಕುಳ ನೀಡಿದ ಕುಡುಕ ಪ್ರಯಾಣಿಕನಿಗೆ ಮಹಿಳೆಯೊಬ್ಬರು ಬಸ್ಸಿನಲ್ಲಿಯೇ 26 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ತನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಖಾಸಗಿ ಸ್ಥಳವನ್ನು ಮುಟ್ಟಿದ್ದರಿಂದ ಕೋಪಗೊಂಡ ಮಹಿಳೆ ಪುರುಷ ಪ್ರಯಾಣಿಕನ ಕೆನ್ನೆಗೆ ಹೊಡೆದಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಕಂಡಕ್ಟರ್​ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಚಲಿಸುತ್ತಿರುವ ಬಸ್‌ನಲ್ಲಿ ಮದ್ಯದ ಅಮಲಿನಲ್ಲಿ ತನಗೆ ಕಿರುಕುಳ ನೀಡಿದ ವ್ಯಕ್ತಿಗೆ ಮಹಿಳೆಯೊಬ್ಬರು ಥಳಿಸಿದ ವಿಡಿಯೋ ವೈರಲ್ ಆಗಿದೆ. ಆ ಮಹಿಳೆ ಪುರುಷನಿಗೆ ಒಂದಲ್ಲ ಎರಡಲ್ಲಿ 26 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಆ ವ್ಯಕ್ತಿ ಬಸ್ಸಿನಲ್ಲಿ ಆಕೆಯ ಪಕ್ಕದಲ್ಲಿ ಕುಳಿತಿದ್ದ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 20, 2024 04:46 PM