ಹುಬ್ಬಳ್ಳಿ ವೇದಿಕೆಯಲ್ಲೂ ಹನುಮಂತನ ಮದುವೆ ಮಾತು; ಬಿಗ್ ಬಾಸ್ ವಿನ್ನರ್ ಹೇಳಿದ್ದೇನು?

|

Updated on: Feb 22, 2025 | 5:44 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ವಿನ್ನರ್ ಆದ ಬಳಿಕ ಹನುಮಂತ ಅವರ ಜನಪ್ರಿಯತೆ ಹೆಚ್ಚಾಗಿದೆ. ಈಗ ಜನರು ಅವರ ಮದುವೆ ಬಗ್ಗೆ ವಿಚಾರಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಕೂಡ ಹನುಮಂತನಿಗೆ ಮದುವೆ ಕುರಿತು ಪ್ರಶ್ನೆ ಎದುರಾಗಿದೆ. ಮನಸ್ಸಿನ ಮಾತು ಹೇಳು ಎಂದು ಕಾರ್ಯಕ್ರಮದ ನಿರೂಪಕರು ಒತ್ತಾಯ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಮದುವೆ ಆಗಬೇಕು ಎಂಬ ಬಗ್ಗೆ ಹನುಮಂತ ಮಾತನಾಡಿದ್ದರು. ಆ ಕುರಿತು ಅವರಿಗೆ ಎಲ್ಲರೂ ಈಗ ಪ್ರಶ್ನೆ ಕೇಳುತ್ತಿದ್ದಾರೆ. ಹುಬ್ಬಳಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲೂ ಹನುಮಂತನಿಗೆ ಇದೇ ಪ್ರಶ್ನೆ ಎದುರಾಗಿದೆ. ‘ನಿನ್ನ ಮಾರಿ ನೋಡಂಗ ಆಗೈತಿ..’ ಎಂದು ಹನುಮಂತ ಹಾಡು ಶುರು ಮಾಡಿದರು. ಆಗ ‘ಯಾರ ಮಾರಿ ನೋಡಂಗ ಆಗೈತಿ? ಮನಸ್ಸಿನ ಮಾತನ್ನು ಹುಬ್ಬಳ್ಳಿಯ ಜನರ ಮುಂದೆ ಹೇಳಲೇಬೇಕು’ ಎಂದು ನಿರೂಪಕರು ಒತ್ತಾಯ ಮಾಡಿದರು. ಆದರೂ ಹನುಮಂತ ಅಸಲಿ ವಿಚಾರ ಬಾಯಿಬಿಡಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 22, 2025 05:42 PM