ಸುದೀಪ್ ಎದುರು ಕಳಚಲಿದೆ ಗುಳ್ಳೆನರಿ ಯಶಸ್ ಮುಖವಾಡ
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ‘ಗುಳ್ಳೆನರಿ’ಯ ಆಟ ಮನೆ ಮಂದಿಯನ್ನು ಗೊಂದಲಕ್ಕೆ ದೂಡಿದೆ. ಇಡೀ ವಾರ ಗುಳ್ಳೆನರಿಯ ಪಾತ್ರಧಾರಿ ಮನೆ ಸದಸ್ಯರನ್ನು ಕಾಡಿದ್ದು, ಆಸಿಯಾ ಫಿರ್ದೋಸ್ ಮತ್ತು ಸೌಂದರ್ಯ ಶೆಟ್ಟಿ ಬೆಚ್ಚಿಬಿದ್ದಿದ್ದಾರೆ. ಪ್ರಶಾಂತ್ ಹಂಟೆಡ್ ಎಂಬ ಸಂಗತಿಯೂ ಬಹಿರಂಗವಾಗಿದೆ. ಈ ಗುಳ್ಳೆನರಿ ಯಾರೆಂಬ ರಹಸ್ಯವು ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಕಿಚ್ಚನ ಪಂಚಾಯ್ತಿಯಲ್ಲಿ ಹೊರಬೀಳಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಗುಳ್ಳೆನರಿಯ ಕುರಿತಾದ ನಿಗೂಢ ಘಟನೆಗಳು ಮನೆ ಮಂದಿಯ ಕುತೂಹಲಕ್ಕೆ ಕಾರಣವಾಗಿವೆ. ಇಡೀ ವಾರ ಬಿಗ್ ಬಾಸ್ ಮನೆಯಲ್ಲಿ ಒಂದು ಗುಳ್ಳೆನರಿಯ ಪಾತ್ರಧಾರಿ ಎಲ್ಲರನ್ನೂ ಕಾಡಿದೆ. ಈ ಗುಳ್ಳೆನರಿ ಯಾರೆಂಬ ಪ್ರಶ್ನೆ ಎಲ್ಲರಲ್ಲೂ ಇದೆ.
ಗುಳ್ಳೆ ನರಿ ಆಗಿದ್ದು ಯಶಸ್. ಆದರೆ, ಅದನ್ನು ಕಂಡು ಹಿಡಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ಕಿಚ್ಚನ ಪಂಚಾಯ್ತಿಯಲ್ಲಿ ಈ ನಿಗೂಢ ಗುಳ್ಳೆನರಿಯ ಗುರುತು ಬಹಿರಂಗವಾಗಲಿದೆ. ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸಂಚಿಕೆಯಲ್ಲಿ, ಬಿಗ್ ಬಾಸ್ ಮನೆಯ ಸದಸ್ಯರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಿದ್ದಾರೆ. ಈ ಮೂಲಕ ಈ ವಾರದ ಬಿಗ್ ಬಾಸ್ ಸಂಚಿಕೆಗಳು ಮತ್ತಷ್ಟು ರೋಚಕವಾಗಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
