ಅದ್ದೂರಿ ಮೆರವಣಿಗೆ, ಹೂವಿನ ಮಳೆ; ಪಾವಗಡದಲ್ಲಿ ಮಂಜುಗೆ ಸ್ವಾಗತ ಹೇಗಿತ್ತು ನೋಡಿ

Edited By:

Updated on: Aug 16, 2021 | 4:37 PM

ಮಂಜು ಅವರನ್ನು ಕಾರಿನ ಮೇಲೆ ಕರೆದುಕೊಂಡು ಹೋಗಿ ಮೆರವಣಿಗೆ ಮಾಡಲಾಗಿದೆ. ಹೂವಿನ ಮಳೆ ಸುರಿದು ಅಭಿಮಾನಿಗಳು ಮಂಜು ಅವರನ್ನು ಸ್ವಾಗತಿಸಿದ್ದಾರೆ.

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ವಿನ್ನರ್​​ ಮಂಜು ಅವರು ತಮ್ಮ ಹುಟ್ಟೂರು ಪಾವಗಡದ ಮೇಲೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ. ಬಿಗ್​ ಬಾಸ್​ ಗೆದ್ದ ನಂತರದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವುದು, ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬಂದು ಅಭಿಮಾನಿಗಳ ಜತೆ ಚರ್ಚೆ ನಡೆಸುವುದರಲ್ಲಿ ಮಂಜು ಬ್ಯುಸಿಯಾಗಿದ್ದರು. ಈಗ ಅವರು ಒಂದು ವಾರದ ಬಳಿಕ ತಮ್ಮ ಹುಟ್ಟೂರಿಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.

ಮಂಜು ಅವರನ್ನು ಕಾರಿನ ಮೇಲೆ ಕರೆದುಕೊಂಡು ಹೋಗಿ ಮೆರವಣಿಗೆ ಮಾಡಲಾಗಿದೆ. ಹೂವಿನ ಮಳೆ ಸುರಿದು ಅಭಿಮಾನಿಗಳು ಮಂಜು ಅವರನ್ನು ಸ್ವಾಗತಿಸಿದ್ದಾರೆ. ಈ ಸ್ವಾಗತ ನೋಡಿ ಮಂಜು ಸಾಕಷ್ಟು ಖುಷಿಪಟ್ಟಿದ್ದಾರೆ. ಅವರ ಸ್ವಾಗತ ಹೇಗಿತ್ತು ಎನ್ನುವುದಕ್ಕೆ ಇಲ್ಲಿದೆ ವಿಡಿಯೋ. ಅಂದಹಾಗೆ, ಆಗಸ್ಟ್​ 8ರಂದು ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಫಿನಾಲೆ ನಡೆದಿತ್ತು.

ಇದನ್ನೂ ಓದಿ: ನಿಮ್ಮದು ಸುದೀಪ್​ ಜಾತಿಯೇ ಆಗಿದ್ರಿಂದ ಬಿಗ್​ಬಾಸ್​ ಟ್ರೋಫಿ ಸಿಕ್ತು ಎಂದವರಿಗೆ ಖಡಕ್ ಉತ್ತರ ಕೊಟ್ಟ ಮಂಜು ಪಾವಗಡ

Loading...
Unable to load recommendations.
Follow Us
TV9 Web

TV9 Kannada

Read More