ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್

|

Updated on: Dec 31, 2024 | 7:31 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಯಾವುದೇ ಕಷ್ಟದ ಟಾಸ್ಕ್ ಇಲ್ಲ. ಬಿಗ್​ಬಾಸ್ ಸ್ಪರ್ಧಿಗಳ ಮನೆಯ ಸದಸ್ಯರು ಒಬ್ಬೊಬ್ಬರಾಗಿ ಬಿಗ್​ಬಾಸ್ ಮನೆಗೆ ಬರುತ್ತಿದ್ದಾರೆ. ಮನೆಯ ಸದಸ್ಯರೆಲ್ಲ ಖುಷಿಯಾಗಿದ್ದಾರೆ. ಇದೆಲ್ಲದರ ನಡುವೆ ಬಿಗ್​ಬಾಸ್ ಸ್ಪರ್ಧಿಗಳಿಗೆ ಕೀ ಕೊಡುವ ಕಾರ್ಯವನ್ನು ಬಿಗ್​ಬಾಸ್ ಮಾಡುತ್ತಿದ್ದಾರೆ. ಇದು ಸ್ಪರ್ಧಿಗಳಿಗೆ ಒಳ್ಳೆಯ ಮಜಾ ಕೊಡುತ್ತಿದೆ.

ಬಿಗ್​ಬಾಸ್ ಮನೆಯ ಎಲ್ಲ ಸದಸ್ಯರ ಕೀಲಿ ಕೈ ಈಗ ಬಿಗ್​ಬಾಸ್​ ಬಳಿ ಇದೆ. ಬಿಗ್​ಬಾಸ್ ಹೇಳಿದಂತೆ ಮನೆಯ ಸದಸ್ಯರು ಕೇಳಬೇಕು, ಬಿಗ್​ಬಾಸ್ ಕೂರೆಂದರೆ ಕೂರಬೇಕು, ನಿಲ್ಲೆಂದರೆ ನಿಲ್ಲಬೇಕು, ಓಡೆಂದರೆ ಓಡಬೇಕು. ಬಿಗ್​ಬಾಸ್ ಮನೆಗೆ ಈಗ ಸ್ಪರ್ಧಿಗಳ ಕುಟುಂಬದವರು ಬರುತ್ತಿದ್ದಾರೆ. ಈ ವಾರ ಮನೆಯಲ್ಲಿ ಯಾವುದೇ ಟಾಸ್ಕ್​ ಇಲ್ಲ. ಎಲ್ಲ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಬಿಗ್​ಬಾಸ್ ಕೂರೆಂದಾಗ ಕೂತು, ನಿಲ್ಲೆಂದಾಗ ನಿಂತು ಒಟ್ಟಾರೆ ಸಖತ್ ಮಜಾ ಮಾಡುತ್ತಿದ್ದಾರೆ. ಬಿಗ್​ಬಾಸ್​ನ ಈ ಆದೇಶಗಳು ಸ್ಪರ್ಧಿಗಳಿಗೂ ಸ್ವತಃ ನಗು ತರಿಸುತ್ತಿವೆ. ಮಜಾ ಕೊಡುತ್ತಿವೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ