ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ವಾರವಾಗಿದೆ. ಈ ವಾರದ ಮೊದಲ ವಾರದ ಪಂಚಾಯ್ತಿ ನಿನ್ನೆ (ಅಕ್ಟೋಬರ್ 05) ನಡೆದಿದೆ. ಕಿಚ್ಚು ಸುದೀಪ್, ಮನೆಯ ಮೊದಲ ಕ್ಯಾಪ್ಟನ್ ಹಂಸ ಹಾಗೂ ಮನೆಯಲ್ಲಿ ಪುಂಡಾಟ ಮೆರೆದಿದ್ದ ಲಾಯರ್ ಜಗದೀಶ್ಗೆ ಭರ್ಜರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ವಾರದ ಪಂಚಾಯಿತಿಯ ಎರಡನೇ ದಿನ ಭಾನುವಾರ. ಶನಿವಾರದಂದು ಗಂಭೀರವಾಗಿ ಪಂಚಾಯಿತಿ ನಡೆಸಿದ್ದ ಕಿಚ್ಚ ಸುದೀಪ್, ಭಾನುವಾರ ಎಲ್ಲರನ್ನೂ ನಗಿಸುತ್ತಾ ತಮಾಷೆ ಮಾಡುತ್ತಾ ನಡೆಸಿದ್ದಾರೆ. ಮನೆಯ ಸ್ಪರ್ಧಿಗಳಿಗೆ ಯಾವ ಪ್ರಾಣಿಯನ್ನು ಹೋಲಿಸಬಹುದು ಎಂಬ ಪ್ರಶ್ನೆ ಸುದೀಪ್ ಕೇಳಿದ್ದು, ಅದಕ್ಕೆ ಧನರಾಜ್, ಜಗದೀಶ್ ಅವರನ್ನು ಊಸರವಳ್ಳಿಗೆ ಹೋಲಿಸಿದ್ದಾರೆ. ಅವರು ಒಮ್ಮೆ ಬಿಗ್ಬಾಸ್ ಅನ್ನು ಖರೀದಿಸುತ್ತೇನೆ ಎನ್ನುತ್ತಾರೆ, ಅದೇ ಅಂಗಡಿಯಲ್ಲಿ ಸಿಗುವ ಒಳ ಉಡುಪ ಖರೀದಿ ಮಾಡಲು ಎಂದಿದ್ದಾರೆ. ಧನರಾಜ್ ಕಾಮಿಡಿಗೆ ಎಲ್ಲರೂ ನಕ್ಕಿದ್ದಾರೆ. ಲಾಯರ್ ಜಗದೀಶ್ ಸಹ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ