ಅಂದುಕೊಂಡಿದ್ದಕ್ಕಿಂತ ಜಾಸ್ತಿ ಪೇಮೆಂಟ್ ಸಿಕ್ತು: ಬಿಗ್ ಬಾಸ್ ಸಂಭಾವನೆ ಬಗ್ಗೆ ವಿನಯ್ ಮಾತು

Updated By: ಮದನ್​ ಕುಮಾರ್​

Updated on: Sep 24, 2025 | 10:14 PM

ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವವರಿಗೆ ಒಳ್ಳೆಯ ಸಂಭಾವನೆ ಸಿಗುತ್ತದೆ. ಆ ಬಗ್ಗೆ ಕೆಲವರಿಗೆ ಅನುಮಾನಗಳು ಇವೆ. ಈ ಕುರಿತು ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಅವರು ಮಾತನಾಡಿದ್ದಾರೆ. ‘ನಾನು ಅಂದುಕೊಂಡಿದ್ದಕ್ಕಿಂತಲೂ ಜಾಸ್ತಿ ಪೇಮೆಂಟ್ ಸಿಕ್ಕಿತು’ ಎಂದು ಅವರು ಹೇಳಿದ್ದಾರೆ.

ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ (Bigg Boss Kannada) ಕಾರ್ಯಕ್ರಮದಲ್ಲಿ ಸ್ಪರ್ಧಿಸುವವರಿಗೆ ಒಳ್ಳೆಯ ಸಂಭಾವನೆ (Remuneration) ಸಿಗುತ್ತದೆ. ಆದರೆ ಆ ಬಗ್ಗೆ ಕೆಲವರಿಗೆ ಅನುಮಾನಗಳು ಇವೆ. ಆ ಕುರಿತು ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ (Vinay Gowda) ಅವರು ಮಾತನಾಡಿದ್ದಾರೆ. ‘ನಾನು ಅಂದುಕೊಂಡಿದ್ದಕ್ಕಿಂತಲೂ ಜಾಸ್ತಿ ಪೇಮೆಂಟ್ ಸಿಕ್ಕಿತು. ವಾರದ ಸಂಭಾವನೆ ಇರುತ್ತದೆ. ಅದರ ಜೊತೆಗೆ ಕ್ಯಾಶ್ ಪ್ರೈಸ್ ಗೆಲ್ಲುವ ಅವಕಾಶ ಇರುತ್ತದೆ. ಪೇಮೆಂಟ್​​ಗಿಂತಲೂ 10 ಲಕ್ಷ ರೂಪಾಯಿ ಜಾಸ್ತಿ ಸಿಕ್ಕಿತು. ವಿಜೇತರಿಗೆ ಖಂಡಿತಾ ಆ ಹಣ ಸಿಗುತ್ತದೆ. ಸರ್ಕಾರದ ನಿಯಮದ ಪ್ರಕಾರ ತೆರಿಗೆ ಬಿಟ್ಟು ಉಳಿದದ್ದು ಸಿಗುತ್ತದೆ. ಒಂದೆರಡು ದಿನ ತಡವಾಗಬಹುದು ಅಷ್ಟೇ’ ಎಂದು ವಿನಯ್ ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.