ರಜತ್​ಗೆ ಮಹಿಳೆಯಿಂದ ಕೊಲೆ ಬೆದರಿಕೆ: ಪಾಠ ಕಲಿಸಲು ಕಾನೂನಿನ ಕ್ರಮ

Updated By: ಮದನ್​ ಕುಮಾರ್​

Updated on: Aug 07, 2025 | 7:57 PM

ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ರಜತ್ ಹಾಗೂ ಅವರ ಕುಟುಂಬಕ್ಕೆ ಕೆಲವರಿಂದ ಬೆದರಿಕೆ ಬಂದಿದೆ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡಿದ ರಜತ್ ಅವರನ್ನು ಕೆಲವರು ಟಾರ್ಗೆಟ್ ಮಾಡಿದ್ದಾರೆ. ಅಚ್ಚರಿ ಎಂದರೆ, ಮಹಿಳೆಯೊಬ್ಬರಿಂದ ಕೊಲೆ ಬೆದರಿಗೆ ಬಂದಿದೆ.

ಬಿಗ್ ಬಾಸ್ ಖ್ಯಾತಿಯ ರಜತ್ ಹಾಗೂ ಅವರ ಕುಟುಂಬಕ್ಕೆ ಕೆಲವರು ಬೆದರಿಕೆ ಹಾಕಿದ್ದಾರೆ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಧರ್ಮಸ್ಥಳ (Dharmasthala) ಪ್ರಕರಣದ ಬಗ್ಗೆ ಧ್ವನಿ ಎತ್ತಿದ ರಜತ್ ಅವರನ್ನು ಕೆಲವರು ಟಾರ್ಗೆಟ್ ಮಾಡಿದ್ದಾರೆ. ಅಚ್ಚರಿ ಎಂದರೆ, ಮಹಿಳೆಯೊಬ್ಬರಿಂದಲೇ ಕೊಲೆ ಬೆದರಿಕೆ ಬಂದಿದೆ. ಅಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸುವುದಾಗಿ ರಜತ್ ಹೇಳಿದ್ದಾರೆ. ಪೊಲೀಸ್ ಆಯುಕ್ತರಿಗೆ ದೂರು ನೀಡಲು ರಜತ್ (Rajath) ನಿರ್ಧರಿಸಿದ್ದಾರೆ. ಆ ಬಗ್ಗೆ ಅವರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.