ಹಾಸನ ಉಸ್ತುವಾರಿ ಸಚಿವನ ಜವಾಬ್ದಾರಿ ಬೇಡ ಅತ ಮೂರು ತಿಂಗಳು ಹಿಂದೆಯೇ ಸಿಎಂಗೆ ಹೇಳಿದ್ದೇನೆ: ರಾಜಣ್ಣ
ನಾಳೆ ಬೆಂಗಳೂರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಲಿರುವ ವಿಷಯವಾಗಿ ಮಾತಾಡಿದ ರಾಜಣ್ಣ, ಇವತ್ತು ದೆಹಲಿಯಲ್ಲಿ ಅವರು ಪತ್ರಿಕಾ ಗೋಷ್ಠಿ ನಡೆಸಿ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಪ್ರಸ್ತಾಪ ಮಾಡಿದ್ದಾರೆ, ಕೇವಲ ಮಹದೇವಪುರ ಮಾತ್ರ ಅಲ್ಲ, ಬೆಂಗಳೂರು ಗ್ರಾಮೀಣ ಕ್ಷೇತ್ರದ ಮತದಾನದಲ್ಲೂ ಅಕ್ರಮ ನಡೆದಿದೆ ಅಂತ ಹೇಳಿದ್ದಾರೆ, ನಾಳೆ ಬೆಂಗಳೂರಲ್ಲೇ ಎಲ್ಲವನ್ನೂ ವಿವರಿಸಲಿದ್ದಾರೆ, ಕಾಯೋಣ ಎಂದು ಹೇಳಿದರು.
ಬೆಂಗಳೂರು, ಆಗಸ್ಟ್ 7: ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಹಕಾರ ಮಂತ್ರಿ ಕೆಎನ್ ರಾಜಣ್ಣ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಹಾಸನ ಹೋಗಿ ಧ್ವಜಾರೋಹಣ (flag hoisting) ಮಾಡಲ್ಲ. ಯಾಕ್ಸಾರ್ ಅಂತ ಕೇಳಿದರೆ, ಮೂರು ತಿಂಗಳು ಹಿಂದೆಯೇ ಹಾಸನ ಜಿಲ್ಲೆಯ ಉಸ್ತುವಾರಿಯಿಂದ ಮುಕ್ತಗೊಳಿಸುವಂತೆ ಸಿಎಂ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಮತ್ತು ಮಾಧ್ಯಮದವರಿಗೂ ಅದನ್ನು ಹೇಳಿದ್ದೇನೆ, ವೈಯಕ್ತಿಕ ಕಾರಣಗಳಿಂದಾಗಿ ತನಗೆ ಅಲ್ಲಿಗೆ ಹೋಗಲಾಗುತ್ತಿಲ್ಲ, ಇಷ್ಟರಲ್ಲೇ ಹಾಸನಾಂಬೆ ಉತ್ಸವ ಬೇರೆ ನಡೆಯಲಿದ್ದು ಅದಕ್ಕೆ 20-25 ಲಕ್ಷ ಜನ ಸೇರಲಿದ್ದಾರೆ, ಬೆಂಗಳೂರು ಕೂತು ನಿರ್ದೇಶನಗಳನ್ನು ನೀಡಿದರೆ ನಡೆಯಲ್ಲ ಎಂದು ಹೇಳಿದರು. ರಾಜಣ್ಣ ಬದಲಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಸನದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.
ಇದನ್ನೂ ಓದಿ: ಸೆಪ್ಟಂಬರ್ನಲ್ಲಿ ಕ್ರಾಂತಿ ಹೇಳಿಕೆಗೆ ಬದ್ಧನಾಗಿದ್ದೇನೆ, ನಾಯಕತ್ವ ಬದಲಾವಣೆಯೇನೂ ಇಲ್ಲ: ಕೆಎನ್ ರಾಜಣ್ಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

