AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ 2019ರಲ್ಲಿ ಕೇವಲ ಒಂದು ಸ್ಥಾನ ಗೆದ್ದಿತ್ತು, 2024 ರಲ್ಲಿ 9 ಗೆದ್ದಿದ್ದು ಹೇಗೆ? ಪಿಸಿ ಮೋಹನ್, ಸಂಸದ

ಕಾಂಗ್ರೆಸ್ 2019ರಲ್ಲಿ ಕೇವಲ ಒಂದು ಸ್ಥಾನ ಗೆದ್ದಿತ್ತು, 2024 ರಲ್ಲಿ 9 ಗೆದ್ದಿದ್ದು ಹೇಗೆ? ಪಿಸಿ ಮೋಹನ್, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 07, 2025 | 8:26 PM

Share

ಭಾರತದ ಚುನಾವಣಾ ಆಯೋಗ ಒಂದು ಪ್ರತಿಷ್ಠಿತ ಸಂಸ್ಥೆಯಾಗಿದೆ, ಯಾರೂ ಅದನ್ನು ದೂಷಿಸುವುದಿಲ್ಲ, ಬಿಹಾರನಲ್ಲಿ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಅನ್ನೋದು ರಾಹುಲ್ ಗಾಂಧಿಯವರಿಗೆ ಮನವರಿಕೆಯಾಗಿದೆ, ಹಾಗಾಗೇ ಅವರು ಎಸ್​ಐಅರ್ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದಾರೆ, ಅವರು ಮಾಡಿರುವ ಆರೋಪಗಳಿಗೆ ಚುನಾವಣಾ ಆಯೋಗ ಒಂದು ನೊಟೀಸ್ ನೀಡಿದೆ, ಅದಕ್ಕೆ ಉತ್ತರ ನೀಡುವ ಕೆಲಸ ಮಾಡಲಿ ಎಂದು ಮೋಹನ್ ಹೇಳಿದರು.

ಬೆಂಗಳೂರು, ಆಗಸ್ಟ್ 7: ಬೆಂಗಳೂರು ಸೆಂಟ್ರಲ್ ಲೋಕ ಸಭಾ ಕ್ಷೇತ್ರದಿಂದ ಸತತವಾಗಿ 4 ಸಲ ಸಂಸತ್ತಿಗೆ ಆಯ್ಕೆಯಾಗಿರುವ ಬಿಜೆಪಿಯ ಪಿಸಿ ಮೋಹನ್ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ (Rahul Gandhi) ಚುನಾವಣಾ ಆಯೋಗದ ಮೇಲೆ ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ, ಸೆಂಟ್ರಲ್ ಮತಕ್ಷೇತ್ರದ ಭಾಗವಾಗಿರುವ ಮಹದೇವಪುರದಲ್ಲಿ ಮತಗಳ್ಳತನ ಆಗಿಲ್ಲ, ಬಿಹಾರದಲ್ಲಿ ಅಸೆಂಬ್ಲಿ ಚುನಾವಣೆಗೆ ಮೊದಲು ಸ್ಪೇಷಲ್ ಇಂಟೆನ್ಸಿವ್ ರಿವಿಜನ್ ನಡೆಯುತ್ತಿದೆ, ಆ ಥರದ ರಿವಿಜನ್ ಭಾರತದ ಎಲ್ಲ ರಾಜ್ಯಗಳಲ್ಲಿ ನಡೆದರೆ ವೋಟರ್ ಲಿಸ್ಟ್​ಗಳು ಸ್ವಚ್ಛವಾಗುತ್ತವೆ, ಅದಕ್ಕೆ ಸಹಕಾರ ನೀಡುವ ಬದಲು ರಾಹುಲ್ ಗಾಂಧಿಯವರು ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 1 ಸೀಟು ಗೆದ್ದಿದ್ದ ಕಾಂಗ್ರೆಸ್ 2024ರಲ್ಲಿ 9 ಸ್ಥಾನ ಗೆದ್ದಿದ್ದು ಹೇಗೆ? ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಕಾಂಗ್ರೆಸ್ ಸರ್ಕಾರವ್ಯಾಕೆ ಚುನಾವಣಾ ಅಕ್ರಮಗಳನ್ನು ಎಸಗಿರಬಾರದು ಎಂದು ಮೋಹನ್ ಪ್ರಶ್ನಿಸಿದರು.

ಇದನ್ನೂ ಓದಿ:  ಮೆಟ್ರೋನಲ್ಲಿ ಸಂಚರಿಸಿ ಪ್ರಯಾಣಿಕರ ಸಮಸ್ಯೆ ಆಲಿಸಿದ ತೇಜಸ್ವಿ ಸೂರ್ಯ, ಪಿಸಿ ಮೋಹನ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ