AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟಂಬರ್​ನಲ್ಲಿ ಕ್ರಾಂತಿ ಹೇಳಿಕೆಗೆ ಬದ್ಧನಾಗಿದ್ದೇನೆ, ನಾಯಕತ್ವ ಬದಲಾವಣೆಯೇನೂ ಇಲ್ಲ: ಕೆಎನ್ ರಾಜಣ್ಣ

ಸೆಪ್ಟಂಬರ್​ನಲ್ಲಿ ಕ್ರಾಂತಿ ಹೇಳಿಕೆಗೆ ಬದ್ಧನಾಗಿದ್ದೇನೆ, ನಾಯಕತ್ವ ಬದಲಾವಣೆಯೇನೂ ಇಲ್ಲ: ಕೆಎನ್ ರಾಜಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 24, 2025 | 2:46 PM

Share

ಸೆಪ್ಟಂಬರ್ ಕ್ರಾಂತಿಯ ಮುನ್ಸೂಚನೆ ನೀಡಿರುವ ನಿಮ್ಮನ್ನು ಕ್ರಾಂತಿವೀರ ರಾಜಣ್ಣ ಅಂತ ಕರೆಯಬಹುದೇ ಅಂತ ಕೇಳಿದರೆ ನಂಗ್ಯಾಕೆ ಅಂಥ ಬಿರುದುಗಳು ಎಂದು ಹೇಳಿ ರಾಜಣ್ಣ ಪುನಃ ನಗುತ್ತಾರೆ. ನಾಯಕತ್ವ ಬದಲಾವಣೆ ಏನಾದರೂ ಆಗಲಿದೆಯಾ? ದೆಹಲಿಯಿಂದ ವಾಪಸ್ಸು ಬಂದ ಬಳಿಕ ಸಿದ್ದರಾಮಯ್ಯನವರೇ ನಾನು ಪೂರ್ಣಾವಧಿಗೆ ಸಿಎಂ ಅಂತ ಹೇಳಿದ್ದಾರೆ ಅಂತ ರಾಜಣ್ಣ ಹೇಳುತ್ತಾರೆ..

ಬೆಳಗಾವಿ, ಜುಲೈ 24: ಸಹಕಾರ ಸಚಿವ ಕೆಎನ್ ರಾಜಣ್ಣ ಇಂದು ಬೆಳಗಾವಿಯಲ್ಲಿದ್ದರು. ಸೆಪ್ಟಂಬರ್ ಕ್ರಾಂತಿಯ (September Revolution) ಬಗ್ಗೆ ಅವರು ಹೇಳಿದ್ದು ಕನ್ನಡಿಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ ಮತ್ತು ಕನ್ನಡಿಗರು ಏನ ಕ್ರಾಂತಿ ನಡೆಯಬಹುದು ಅಂತ ಜಿಜ್ಞಾಸೆಯಲ್ಲಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಕ್ರಾಂತಿಯ ಬಗ್ಗೆ ಪ್ರಶ್ನೆ ನಿರೀಕ್ಷಿಸಿರಲಿಲ್ಲ. ಆದರೆ ರಾಜಣ್ಣ ಚತುರ ರಾಜಕಾರಣಿ, ಮಾತುಗಳನ್ನು ತೇಲಿಸಿಬಿಡುವ ತಂತ್ರ ಅವರಿಗೆ ಚೆನ್ನಾಗಿ ಗೊತ್ತು. ನಾನು ಹೇಳಿದ್ದಕ್ಕೆ ಬದ್ಧನಾಗಿದ್ದೇನೆ, ಹೇಳಿಕೆಯಿಂದ ಹಿಂಜರಿಯುವುದಿಲ್ಲ, ಬೇರೆ ನಾಯಕರಾದರೆ ಇಂಥ ವಿಷಯಗಳನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ, ಬಹಿರಂಗಗೊಳಿಸುವುದಿಲ್ಲ, ಅದರೆ ನನಗೆ ಮಾಧ್ಯಮದವರು ಕಂಡಕೂಡಲೇ ಎಲ್ಲವನ್ನು ಹೇಳಿಬಿಡುವ ತುಡಿತ ಶುರುವಾಗುತ್ತದೆ ಎಂದು ನಗುತ್ತಾ ಹೇಳಿದರು.

ಇದನ್ನೂ ಓದಿ:  ಹಾಸನದಲ್ಲಿ ಹೃದಯಾಘಾತ: ಶಾಲೆಗಳಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆಗೆ ಸಚಿವ ರಾಜಣ್ಣ ಸೂಚನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ