ನೆಲಕಚ್ಚಿದ ಈರುಳ್ಳಿ ಸಗಟು ಬೆಲೆ, ಕಂಗಾಲಾಗಿರುವ ಬೆಳೆಗಾರರಿಂದ ಸರ್ಕಾರದ ಮಧ್ಯಸ್ಥಿಕೆಗೆ ಬೇಡಿಕೆ
ಈರುಳ್ಳಿ ಬೆಲೆ ಏಕಾಏಕಿ ಕುಸಿದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಮಹಾರಾಷ್ಟ್ರದಿಂದಲೂ ಬೆಳಗಾವಿ ಎಪಿಎಂಸಿಗೆ ಈರುಳ್ಳಿ ಬರುತ್ತಿರೋದ್ರಿಂದ ಬೆಲೆ ಕುಸಿತ ಕಂಡಿದೆ ಎಂದು ಹೇಳಲಾಗುತ್ತಿದೆ. ಹೀಗಾದರೆ ರೈತರು ಬದುಕುವುದಾದರೂ ಹೇಗೆ? ಈರುಳ್ಳಿಯನ್ನು ವಾಪಸ್ಸು ಒಯ್ದು ದಾಸ್ತಾನು ಕೂಡ ಮಾಡಲಾಗದು, ಅದು ಕೊಳೆಯುತ್ತದೆ ಎಂದು ರೈತ ಸಿದ್ದಪ್ಪ ಹೇಳುತ್ತಾರೆ.
ಬೆಳಗಾವಿ, ಜುಲೈ 24: ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಬಹುದೇ? ಸರ್ಕಾರಗಳು ಅದನ್ನು ಮಾಡಿದ್ದರೆ ರೈತರು ಸಾವಿಗೆ ಶರಣಾಗುವುದು ಬಹಳಷ್ಟು ಮಟ್ಟಿಗೆ ನಿಲ್ಲುತಿತ್ತು. ಜಮಖಂಡಿ ತಾಲೂಕಿನ ಈರುಳ್ಳಿ ಬೆಳೆಗಾರ ಸಿದ್ದಪ್ಪ ಹೇಳುವುದನ್ನು ಕೇಳಿ. ಅವರು ತಾವು ಬೆಳೆದ ಈರುಳ್ಳಿಯನ್ನು ಗೂಡ್ಸ್ ಕ್ಯಾರಿಯರ್ನಲ್ಲಿ ಹೇರಿಕೊಂಡು ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದಾರೆ. ಆದರೆ ಈರುಳ್ಳಿಯ ಸಗಟು ಬೆಲೆ ಕೇಳಿ ಹೌಹಾರಿ ಹೋಗಿದ್ದಾರೆ. ಪ್ರತಿ ಕ್ವಿಂಟಾಲ್ಗೆ ₹ 800 ರಿಂದ ₹1400 ರಂತೆ ಈರುಳ್ಳಿ ಖರೀದಿಸಲಾಗುತ್ತಿದೆ! ಕಳೆದ ವರ್ಷ ಇದೇ ಸಮಯದಲ್ಲಿ ಬೆಲೆ ₹ 2,500 ರಿಂದ 3,000 ವರೆಗೆ ದರ ಇತ್ತು ಎಂದು ಸಿದ್ದಪ್ಪ ಹೇಳುತ್ತಾರೆ. ಅವರು ತಂದಿರುವ ಈರುಳ್ಳು ಮೂಟೆಗಳನ್ನು ಪ್ರಸ್ತುತ ಬೆಲೆಗೆ ಮಾರಿದರೆ ವಾಹನದ ಟ್ರಾನ್ಸ್ಪೋರ್ಟೇಷನ್ ಖರ್ಚೂ ಹುಟ್ಟಲ್ಲ!
ಇದನ್ನೂ ಓದಿ: Onion Price: ಈರುಳ್ಳಿ ಬೆಲೆ ದಿಢೀರ್ ಇಳಿಕೆ, ಕ್ವಿಂಟಾಲ್ಗೆ 4000 ಇದ್ದ ದರ 2000 ರೂ.ಗೆ ಕುಸಿತ, ರೈತರು ಕಂಗಾಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

