Onion Price: ಈರುಳ್ಳಿ ಬೆಲೆ ದಿಢೀರ್ ಇಳಿಕೆ, ಕ್ವಿಂಟಾಲ್​ಗೆ 4000 ಇದ್ದ ದರ 2000 ರೂ.ಗೆ ಕುಸಿತ, ರೈತರು ಕಂಗಾಲು

Onion Price in Karnataka: ಕರ್ನಾಟಕದ ಈರುಳ್ಳಿ ಬೆಳೆಗಾರರ ಆಕ್ರೋಶದ ಕಟ್ಟೆಯೊಡೆದಿದೆ. ಒಂದೆಡೆ ಬೆವರಿಳಿಸಿ ಬೆಳೆದ ಬೆಳೆ ಮಳೆಯ ಆರ್ಭಟಕ್ಕೆ ಜಮೀನಿನಲ್ಲೇ ಕೊಳೆತು ಹೋಗಿದೆ. ಇನ್ನೊಂದೆಡೆ ದಿಢೀರ್​ ಬೆಲೆ ಇಳಿಕೆ ರೈತರನ್ನು ಹೈರಾಣಾಗಿಸಿದೆ. ಈರುಳ್ಳಿ ಬೆಲೆ ಕ್ವಿಂಟಾಲ್​ಗೆ 4000 ಇದ್ದ ದರ 2000 ರೂ.ಗೆ ಇಳಿಕೆಯಾಗಿದೆ. ಇದರಿಂದ ಕಂಗೆಟ್ಟ ರೈತರು ಹೋರಾಟದ ಹೆಜ್ಜೆ ಇಟ್ಟಿದ್ದಾರೆ.

Onion Price: ಈರುಳ್ಳಿ ಬೆಲೆ ದಿಢೀರ್ ಇಳಿಕೆ, ಕ್ವಿಂಟಾಲ್​ಗೆ 4000 ಇದ್ದ ದರ 2000 ರೂ.ಗೆ  ಕುಸಿತ, ರೈತರು ಕಂಗಾಲು
ಈರುಳ್ಳಿ (ಸಾಂದರ್ಭಿಕ ಚಿತ್ರ)Image Credit source: PTI
Follow us
| Updated By: ಗಣಪತಿ ಶರ್ಮ

Updated on:Oct 30, 2024 | 3:14 PM

ಬೆಂಗಳೂರು, ಅಕ್ಟೋಬರ್ 30: ರೈತ ಬೆವರು ಸುರಿಸಿ ದುಡಿದ ಈರುಳ್ಳಿ ಬೆಳೆ ಏಕಾಏಕಿ ಸುರಿದ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಈ ವರ್ಷ ಆರಂಭದಲ್ಲಿ ಮಳೆಯ ಸಮಸ್ಯೆ ಏನೂ ಆಗಿರಲಿಲ್ಲ. ಫಸಲು ಚೆನ್ನಾಗಿಯೇ ಬಂದಿತ್ತು. ಹೀಗಾಗಿ ಇನ್ನೇನು ನೆಮ್ಮದಿಯಾಗಿರಬಹುದು ಎಂದುಕೊಂಡಿದ್ದ ರೈತನೆದೆಗೆ ಬರಸಿಡಿಲಿನಂತೆ ಅಪ್ಪಳಿಸಿದ್ದು ಇದೇ ಮಳೆ. ಏಕಾಏಕಿ ಬಿಟ್ಟೂ ಬಿಡದಂತೆ ಸುರಿದ ಮಳೆ ರಾಜ್ಯಾದ್ಯಂತ ಆತಂಕವನ್ನೇ ಸೃಷ್ಟಿಸಿತ್ತು. ಇದರ ಪರಿಣಾಮದಿಂದ ಚಿತ್ರದುರ್ಗ, ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ ಜಿಲ್ಲೆಗಳ ಸಾವಿರಾರು ಹೆಕ್ಟೇರ್​ ಪ್ರದೇಶಗಳಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸರ್ವನಾಶವಾಗಿದೆ.

ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಗೆ ಕೆರೆ ಕಟ್ಟೆಗಳು ತುಂಬಿ ಹರಿದು, ಜಿಲ್ಲೆಯ ಹಲವು ಕಡೆಗಳಲ್ಲಿ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಇದರಿಂದಾಗಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಸರ್ವನಾಶವಾಗಿತ್ತು. ಸಚಿವ ಕೃಷ್ಣ ಬೈರೇಗೌಡ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ರೈತರಿಗೆ ಲಕ್ಷ ಲಕ್ಷ ನಷ್ಟ

ಈರುಳ್ಳಿ ಬೆಳೆ ಬೆಳೆಯಲು ಎಕರೆಗೆ 80 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಖರ್ಚಾಗುತ್ತದೆ. ಸಾಲಶೂಲ ಮಾಡಿ ಈರುಳ್ಳಿ ಬೆಳೆದು ಈಗ ಲಕ್ಷ ಲಕ್ಷ ನಷ್ಟ ಅನುಭವಿಸುವಂತಾಗಿದೆ ಎಂದು ರೈತ ಶ್ರೀಧರ್ ರೆಡ್ಡಿ ಅಳಲು ತೋಡಿಕೊಂಡಿದ್ದಾರೆ.

ದಿಢೀರ್​ ಕುಸಿದ ಈರುಳ್ಳಿ ಬೆಲೆ

ಗದಗ ಜಿಲ್ಲೆಯಲ್ಲಿ ಈ ಬಾರಿ 14 ಸಾವಿರಕ್ಕೂ ಅಧಿಕ ಪ್ರದೇಶಗಳಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಆದರೆ ವರುಣನ ಆರ್ಭಟಕ್ಕೆ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆ ಸಂಪೂರ್ಣ ಸರ್ವನಾಶವಾಗಿದೆ. ಒಂದೆಡೆ, ಬೆಳೆ ಹಾನಿಯಾದರೆ ಮತ್ತೊಂದೆಡೆ ದಿಢೀರ್​ ಬೆಲೆ ಕುಸಿತ ರೈತರನ್ನು ಜರ್ಜರಿತರನ್ನಾಗಿಸಿದೆ. ಕೇವಲ ನಾಲ್ಕು ದಿನದ ಹಿಂದೆ ಒಂದು ಕ್ವಿಂಟಲ್ ಈರುಳ್ಳಿ ಬೆಲೆ 4 ಸಾವಿರ ರೂ. ಇತ್ತು. ಈಗ ದಿಢೀರ್​ 2 ಸಾವಿರ ರೂಪಾಯಿಗೆ ಕುಸಿದಿದೆ. ಇದರಿಂದ ಅಕ್ಷರಶಃ ದಿಕ್ಕೆಟ್ಟುಹೋದ ರೈತರು, ಬೆಳಗಾವಿ ಎಪಿಎಂಸಿ ಮಾರುಕಟ್ಟೆಗೆ ಬೀಗ ಜಡಿದು ಪ್ರತಿಭಟಿಸತೊಡಗಿದ್ದಾರೆ. ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: ವಿಜಯಪುರ: ಅಂತ್ಯಸಂಸ್ಕಾರಕ್ಕೆಂದು ತುಸು ಜಾಗ ನೀಡಿದ್ದರೆ ಇಡೀ ಆಸ್ತಿಯನ್ನೇ ಕಬಳಿಸಿದ ವಕ್ಫ್!

ಬೆಳಗಾವಿ ಅಷ್ಟೆ ಅಲ್ಲ ಬಾಗಲಕೋಟೆ, ವಿಜಯಪುರ ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಬೆಳಗಾವಿ ಎಪಿಎಂಸಿಯನ್ನು ನೆಚ್ಚಿಕೊಂಡು ಬಂದ ರೈತರ ಸಂಖ್ಯೆ ದೊಡ್ಡದಿತ್ತು. ನಾಲ್ಕು ದಿನದ ಹಿಂದೆ 4 ಸಾವಿರ ರೂಪಾಯಿ ಇದ್ದ ಈರುಳ್ಳಿ ಬೆಲೆ ನಿನ್ನೆ ಏಕಾಏಕಿ 2 ಸಾವಿರದಿಂದ 1800ಕ್ಕೆ ಕುಸಿದಿದ್ದು ಅವರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿತ್ತು. ಈರುಳ್ಳಿ ಬೆಳೆಗಾರರು ಅಧಿಕಾರಿಗಳು, ದಲ್ಲಾಳಿಗಳನ್ನು ಅಡ್ಡಗಟ್ಟಿ ನಿಂತವರು ಮಾರುಕಟ್ಟೆ ಬೀಗ ಜಡಿದು ನಿಂತುಬಿಟ್ಟರು.

ಮಾರುಕಟ್ಟೆಯಲ್ಲಿ ಮಾಮೂಲಿ ದರ!

ಪ್ರತಿ ಕೆಜಿ ಈರುಳ್ಳಿಗೆ ಮಾರುಕಟ್ಟೆಯಲ್ಲಿ 60 ರಿಂದ 65 ರೂಪಾಯಿ ಇದ್ದರೂ ಯಾಕಿಷ್ಟು ಕಡಿಮೆ ಬೆಲೆಗೆ ಈರುಳ್ಳಿ ಖರೀದಿ ಮಾಡುತ್ತೀರಿ ಎಂದು ರೈತರು ಆಕ್ರೋಶ ಹೊರಹಾಕಿದರು. ರೈತರನ್ನು ಸಮಾಧಾನಿಸಲು ಅಧಿಕಾರಿಗಳು ಹೆಣಗಾಡಬೇಕಾಯಿತು.

ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:39 pm, Wed, 30 October 24

‘ಟಾಕ್ಸಿಕ್’ ಸೆಟ್​ ಹಾಕಿರುವ ಸ್ಥಳ ಈಗ ಹೇಗಿದೆ? ವಿವರ ನೋಡಿ ವಿಡಿಯೋದೊಂದಿಗೆ
‘ಟಾಕ್ಸಿಕ್’ ಸೆಟ್​ ಹಾಕಿರುವ ಸ್ಥಳ ಈಗ ಹೇಗಿದೆ? ವಿವರ ನೋಡಿ ವಿಡಿಯೋದೊಂದಿಗೆ
ದುಬಾರಿ ದೀಪಾವಳಿ: ಹೂವು, ಹಣ್ಣು ತರಕಾರಿ ಬೆಲೆ ಏರಿಕೆ
ದುಬಾರಿ ದೀಪಾವಳಿ: ಹೂವು, ಹಣ್ಣು ತರಕಾರಿ ಬೆಲೆ ಏರಿಕೆ
ಶಸ್ತ್ರಚಿಕಿತ್ಸೆಗೊಳಗಾಗಲಿರುವ ದರ್ಶನ್​ಗೆ ಆಸ್ಪತ್ರೆಯೂ ಬಂಧಿಖಾನೆ ಎನಿಸಲಿದೆ
ಶಸ್ತ್ರಚಿಕಿತ್ಸೆಗೊಳಗಾಗಲಿರುವ ದರ್ಶನ್​ಗೆ ಆಸ್ಪತ್ರೆಯೂ ಬಂಧಿಖಾನೆ ಎನಿಸಲಿದೆ
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್