ಗುಡುಗುಡು-ಪಟಪಟ ಎಂದ ಹನುಮಂತ: ಪಾಪ ಮೋಕ್ಷಿತಾ ಕಂಗಾಲು
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11ರ ಭಾನುವಾರದ ಎಪಿಸೋಡ್ನಲ್ಲಿ ಹನುಮಂತು ಹಾಗೂ ಮೋಕ್ಷಿತಾ ಅವರ ಫನ್ನಿ ಗೇಮ್ ನೋಡಿ ಸುದೀಪ್ ಸೇರಿದಂತೆ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.
ಬಿಗ್ಬಾಸ್ ವೇದಿಕೆಗೆ ಸುದೀಪ್ ಬಂದಿದ್ದಾರೆ. ಶನಿವಾರದ ಎಪಿಸೋಡ್ ಅನ್ನು ಬಹಳ ಗಂಭೀರತೆಯಿಂದ ನಡೆಸಿಕೊಟ್ಟ ಸುದೀಪ್, ಉಗ್ರಂ ಮಂಜು, ರಜತ್, ಮೋಕ್ಷಿತಾ, ಗೌತಮಿ ಇನ್ನೂ ಕೆಲವರಿಗೆ ತುಸು ಖಾರವಾಗಿಯೇ ಬುದ್ಧಿವಾದ ಹೇಳಿದ್ದಾರೆ. ಆದರೆ ಭಾನುವಾರದ ಎಪಿಸೋಡ್ ಅನ್ನು ಹಾಸ್ಯಮಯವಾಗಿ ನಡೆಸಿಕೊಟ್ಟಿದ್ದು, ಬಿಗ್ಬಾಸ್ ಮನೆ ಮಂದಿಯ ಕೈಯಲ್ಲಿ ಕೆಲವು ಗೇಮ್ಗಳನ್ನು ಆಡಿಸಿದ್ದಾರೆ. ಹನುಮಂತು ಹಾಗೂ ಮೋಕ್ಷಿತಾ ಗೇಮ್ ಒಂದನ್ನು ಆಡಿದ್ದು, ಅದರಲ್ಲಿ ಹನುಮಂತ ಹೆಲಿಕಾಪ್ಟರ್ ಶಬ್ದ ಬಾಯಿಂದ ಮಾಡಬೇಕು, ಶಬ್ದ ಕೇಳಿಸಿಕೊಂಡು ಮೋಕ್ಷಿತಾ ಅದನ್ನು ಗುರುತಿಸಬೇಕು. ಹನುಮಂತ ಮಾಡಿದ ಹೆಲಿಕಾಪ್ಟರ್ ಶಬ್ದ ಕೇಳಿ ಸುದೀಪ್ ಸೇರಿ ಮನೆ ಮಂದಿಯೆಲ್ಲ ಬಿದ್ದು-ಬಿದ್ದು ನಕ್ಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 01, 2024 02:38 PM
Latest Videos