ಸೌಂದರ್ಯಾ ಶೆಟ್ಟಿ ಮನಒಲಿಸಲು ಸಖತ್ ರೊಮ್ಯಾಂಟಿಕ್ ಆದ ಗಗನ್-ಯಶಸ್
ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಂಜನೆಗೆ ಕೊರತೆಯಿಲ್ಲದಂತೆ ದಿನಕ್ಕೊಂದು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ. ಮನೆಯಲ್ಲಿ ನಡೆದ ವಿಶೇಷ ಟಾಸ್ಕ್‌ನಲ್ಲಿ 'ಶೆಟ್ಟಿ ಡಾನ್' ಸೌಂದರ್ಯಾ ಶೆಟ್ಟಿ ಅವರ ಮನ ಒಲಿಸಲು ಸ್ಪರ್ಧಿ ಗಗನ್ ರೊಮ್ಯಾಂಟಿಕ್ ಅವತಾರವೆತ್ತಿದ್ದಾರೆ. ತನಗೆ ಸಿಕ್ಕ ಪ್ರಶಸ್ತಿಯನ್ನೇ ಕೊಡುಗೆಯಾಗಿ ನೀಡಿ ಗಮನ ಸೆಳೆದಿದ್ದರೆ, ಮತ್ತೊಂದೆಡೆ ಯಶಸ್ ಕೂಡ ಕಠಿಣ ಸ್ಪರ್ಧೆ ಒಡ್ಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಮನರಂಜನೆ ಹಾಗೂ ರೋಚಕ ಸನ್ನಿವೇಶಗಳಿಗೆ ಯಾವುದೇ ಕೊರತೆಯಿಲ್ಲ. ಸದ್ಯ ಬಿಗ್ ಬಾಸ್ ಮನೆಯಲ್ಲಿ ನಡೆದಿರುವ ವಿಶೇಷ ಟಾಸ್ಕ್ ಒಂದರಲ್ಲಿ, ‘ಶೆಟ್ಟಿ ಡಾನ್’ ಎಂದೇ ಕರೆಯಲ್ಪಡುವ ಸೌಂದರ್ಯಾ ಶೆಟ್ಟಿ ಅವರ ಮನ ಒಲಿಸಲು ಸ್ಪರ್ಧಿಗಳು ಹರ ಸಹಾಸ ಪಡೆಉತ್ತಿರುವ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದಿವೆ. ಮನೆಯಲ್ಲಿ ನಡೆದ ಈ ಟಾಸ್ಕ್ ವೇಳೆ ಸ್ಪರ್ಧಿ ಗಗನ್ ಅವರು ಸೌಂದರ್ಯಾ ಶೆಟ್ಟಿ ಅವರಿಗೆ ಉಡುಗೊರೆ ನೀಡಿ, ತಮ್ಮ ವಿಶೇಷ ಶೈಲಿಯಲ್ಲಿ ಮನವೊಲಿಸುವ ಪ್ರಯತ್ನ ಮಾಡಿದರು.ಅವರು ತಮಗೆ ಬಂದ ಉತ್ತಮ ಪದಕವನ್ನೇ ನೀಡಿದರು. ಸೌಂದರ್ಯಾ ಶೆಟ್ಟಿ ಅವರ ಗಮನ ಸೆಳೆಯಲು ಕೇವಲ ಗಗನ್ ಮಾತ್ರವಲ್ಲದೆ, ಯಶಸ್ ಕೂಡ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 29, 2026 09:01 AM
Loading...
Unable to load recommendations.
Follow Us
