ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು

ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು

ಮಂಜುನಾಥ ಸಿ.
|

Updated on: Oct 27, 2024 | 3:29 PM

ಬಿಗ್​ಬಾಸ್ ಕನ್ನಡ ಸೀಸನ್ 11ರ ಭಾನುವಾರದ ಎಪಿಸೋಡ್​ಗೆ ಸುದೀಪ್ ಬದಲಿಗೆ ಮನೆಯೊಳಕ್ಕೆ ಸೃಜನ್ ಲೋಕೇಶ್ ಹೋಗಿದ್ದಾರೆ. ಈ ವೇಳೆ ಹನುಮಂತು, ಮಾನಸ ಬಿಗ್​ಬಾಸ್​ ಮನೆಯಲ್ಲಿ ಹೇಗಿದ್ದಾರೆ, ಅವರು ಹೇಗಿರಬೇಕು ಎಂದು ಸಲಹೆ ಕೊಟ್ಟಿದ್ದಾರೆ.

ಬಿಗ್​ಬಾಸ್ ಮನೆಗೆ ಹನುಮಂತು ಬಂದ ಬಳಿಕ ಮನೆಯ ವಾತಾವರಣ ಸಾಕಷ್ಟು ಬದಲಾಗಿದೆ. ಜಗದೀಶ್ ಇದ್ದಾಗ ಪ್ರತಿ ದಿನ ಜಗಳ ನೋಡುತ್ತಿದ್ದ ಬಿಗ್​ಬಾಸ್ ಮನೆಯಲ್ಲಿ ಇತ್ತೀಚೆಗೆ ತುಸುವಾದರೂ ಶಾಂತಿ ನೆಲೆಸಿದೆ. ಆದರೆ ಇತ್ತೀಚೆಗೆ ಮಾನಸ, ಬಿಗ್​ಬಾಸ್ ಮನೆಯಲ್ಲಿ ಎಲ್ಲರ ಮೇಲೂ ಜಗಳ ಮಾಡಿಕೊಳ್ಳುತ್ತಿದ್ದಾರೆ. ಪುಟ್ಟ-ಪುಟ್ಟದಕ್ಕೆಲ್ಲ ಖ್ಯಾತೆ ತೆಗೆಯುತ್ತಿದ್ದಾರೆ. ಇದರಿಂದ ಮನೆಯ ಇತರೆ ಕೆಲವು ಸದಸ್ಯರ ನೆಮ್ಮದಿ ಹಾಳಾಗಿದೆ. ಭಾನುವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ ಮನೆಗೆ ಸೃಜನ್ ಲೋಕೇಶ್ ಬಂದಿದ್ದು, ಮನೆಯ ಸದಸ್ಯರ ವಿಚಾರಣೆ ಮಾಡಿದ್ದಾರೆ. ಈ ವೇಳೆ, ಹನುಮಂತು, ಮಾನಸ ಬಿಗ್​ಬಾಸ್​ ಮನೆಯಲ್ಲಿ ಹೇಗೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಲ್ಲದೆ, ಹೇಗೆ ವರ್ತಿಸಬೇಕು ಎಂಬುದನ್ನು ತಮ್ಮದೇ ಶೈಲಿನಲ್ಲಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ