AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​ ಆರೋಪ

ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​ ಆರೋಪ

ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ

Updated on: Oct 27, 2024 | 2:10 PM

Vijayapura Waqf Raw: ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಆಯಾ ತಾಲೂಕು ತಹಶೀಲ್ದಾರಗಳು ರೈತರಿಗೆ ನೋಟಿಸ್​ ನೀಡುತ್ತಿರುವುದಕ್ಕೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ, ಅಕ್ಟೋಬರ್​ 27: ವಕ್ಫ್​ ಮಂಡಳಿಯವರು (Vijayapura Waqf Board) ದೇವಸ್ಥಾನಕ್ಕೂ ಕೂಡ ನೋಟಿಸ್ ನೀಡುತ್ತಿದ್ದಾರೆ. ವಕ್ಫ್​ ಕಾನೂನು ವಿರುದ್ಧ ಹೋರಾಟ ಮಾಡುತ್ತೇವೆ. ಅಧಿಕಾರಿಗಳು ನೋಟಿಸ್ ನೀಡುತ್ತಿರುವುದಕ್ಕೆ ರೈತರು ಆತಂಕ ಪಡಬಾರದು, ಕಾನೂನು ಹೋರಾಟ ಮಾಡೋಣ. ನೋಟಿಸ್ ಬಂದರೆ ನಮ್ಮ ಕಚೇರಿ ಸಂಪರ್ಕ ಮಾಡಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ (Basangouda Patil Yatnal) ಯತ್ನಾಳ್​ ಹೇಳಿದರು.

ವಿಜಯಪುರ ಜಿಲ್ಲೆ ಮಾತ್ರವಲ್ಲ ಬೇರೆ ಜಿಲ್ಲೆಯ ರೈತರು ಸಹ ನಮ್ಮ ಕಚೇರಿ ಸಂಪರ್ಕ ಮಾಡಿ. ನೋಟಿಸ್ ನೀಡಿದ್ದರ ಬಗ್ಗೆ ಕಾನೂನು ಹೋರಾಟಕ್ಕೆ ವಕೀಲರ ತಂಡ ರಚಿಸುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರಿಗೆ ಜಾಗೃತಿ ಮೂಡಿಸುತ್ತೇವೆ. ರೈತರಿಗೆ ಉಚಿತ ಕಾನೂನು ನೆರವು ನೀಡುತ್ತೇವೆ. ಸಚಿವ ಜಮೀರ್ ಅಹಮದ್​ ಖಾನ್​ ಪ್ರವಾಸ ಮಾಡಿದ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದರು.

ವಕ್ಫ್​​ ಕಾನೂನು ವಿರುದ್ಧ ಹೋರಾಟ ಮಾಡಲಾಗುವುದು. ಜಿಲ್ಲೆಯಲ್ಲಿ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಯಾವುದೇ ವಕ್ಫ್​ ಆಸ್ತಿ ಆಗಿಲ್ಲ ಎನ್ನುತ್ತಾರೆ. ವಕ್ಫ್​​ ಕಾನೂನು ನೆಹರು ಮಾಡಿರುವ ದೊಡ್ಡ ತಪ್ಪು. ಕರ್ನಾಟಕದಲ್ಲಿ ಮತ್ತೊಂದು ಪಾಕಿಸ್ತಾನ ನಿರ್ಮಾಣ ಮಾಡಿದಕ್ಕೆ ವಕ್ಫ್​ ಕೆಲಸ ಮಾಡುತ್ತಿದೆ. ಈ ಹಿಂದೆ ವಿಜಯಪುರದ ಜಿಲ್ಲಾಧಿಕಾರಿಯಾಗಿದ್ದ ಮೊಹಮ್ಮದ್ ಮೋಹಸೀನ್ ರೈತರ ಜಮೀನು ಪಹಣಿಯಲ್ಲಿ ವಕ್ಫ್​​ ಹೆಸರು ಹಾಕಿ ಹೋಗಿದ್ದಾರೆ. ಅವರ ಮೇಲೆ ಕ್ರಮಕ್ಕಾಗಿ ಒತ್ತಾಯ ಮಾಡಿದ್ದೆ. ಆದರೆ, ನಮ್ಮವರೇ ಬಿಎಸ್​ ಯಡಿಯೂರಪ್ಪ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆರೋಪ ಮಾಡಿದರು.

ವಿಜಯಪುರ ಜಿಲ್ಲೆಯ ಇಬ್ಬರು ಶಾಸಕರು ಮುಸ್ಲಿಂ ಪರವಾಗಿ ಕೆಲಸ ಮಾಡುತ್ತಾರೆ. ಮುಸ್ಲಿಂಮರ ನಾಯಕರಾಗಲು ಹೋಗುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ