AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರೆತು ಹೋಗಿದ್ದ 30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್

ಮರೆತು ಹೋಗಿದ್ದ 30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Oct 27, 2024 | 12:05 PM

Share

ಮಹಿಳೆಯೊಬ್ಬರು ಬಸ್​ನಲ್ಲೇ ಚಿನ್ನಾಭರಣ ಇದ್ದ ಬ್ಯಾಗ್ ಮರೆತುಹೋಗಿದ್ದು, ಇದನ್ನು ಗಮನಿಸಿದ ಲೇಡಿ ಕಂಡಕ್ಟರ್​ ಮಹಿಳೆಗೆ ವಾಪಸ್ ಬ್ಯಾಗ್ ನೀಡಿದ್ದಾರೆ. ಬ್ಯಾಗ್ ಮರೆತುಹೋಗಿದ್ದ ಮಹಿಳೆಯನ್ನು ಪತ್ತೆ ಮಾಡಿದ್ದೇ ರೋಚಕ

ಗದಗ, (ಅಕ್ಟೋಬರ್ 27): ವ್ಯಕ್ತಿಯೊಬ್ಬರ ಜೇಬಿನಿಂದ ಹತ್ತು ರೂಪಾಯಿ ಆಚೆ ಬಿದ್ದರು ಎತ್ತಿಕೊಂಡು ಹೋಗುವ ಈಗಿನಲ ಕಾಲದಲ್ಲಿ ಬಸ್ ನಲ್ಲೇ ಬಿಟ್ಟು ಹೋಗಿದ್ದ ಚಿನ್ನಾಭರಣ ಇದ್ದ ಬ್ಯಾಗ್​ ಅನ್ನು ನಿರ್ವಾಹಕಿ ವಾಪಸ್ ನೀಡಿದ್ದಾರೆ. ಗದಗ ತಾಲೂಕಿನ ಮುಳಗುಂದ ಪಟ್ಟಣದ ಶಕಿಲಾಬಾನು ಎಂಬ ಮಹಿಳೆ, ಮೂವತ್ತು ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ ಮತ್ತು 2160 ರೂ. ಇದ್ದ ಬ್ಯಾಗ್ ಅನ್ನು ಬಸ್​ನಲ್ಲೇ ಬಿಟ್ಟು ಹೋಗಿದ್ದರು. ಬಳಿಕ ಬಸ್​ ನಿರ್ವಾಹಕಿ ಅನಸೂಯಾ ಅವರು ಬ್ಯಾಗ್ ಗಮನಿಸಿ ತಮ್ಮ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಬೆಟಗೇರಿ ಬಡಾವಣೆ ಪೊಲೀಸರು ಮಾಹಿತಿ ನೀಡಿ. ಬ್ಯಾಗ್ ನಲ್ಲಿದ್ದ ಪ್ಯಾನ್ ಕಾರ್ಡ್ ಮೂಲಕ ಮಹಿಳೆಯನ್ನು ಪತ್ತೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಬ್ಯಾಗ್​ ಹಸ್ತಾಂತರಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಮಹಿಳೆಗೆ ಆಭರಣ ಹಾಗೂ ಹಣ ಮರಳಿಸಿದ್ದು, ನಿರ್ವಾಹಕಿಯ ಪ್ರಮಾಣಿಕ ಕರ್ತವ್ಯಕ್ಕೆ ಸಾರ್ವಜನಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.