ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ

Updated on: Dec 14, 2024 | 3:26 PM

Bigg Boss Kannada: ಈ ವಾರ ಬಿಗ್​ಬಾಸ್ ಮನೆಯಲ್ಲಿ ಹಲವು ಘಟನೆಗಳು ನಡೆದಿವೆ. ರಜತ್, ಧನರಾಜ್​ ಮೇಲೆ ರೌಡಿಸಂ ತೋರಿಸಿದ್ದಾರೆ. ಉಗ್ರಂ ಮಂಜು ಹಾಗೂ ಗೌತಮಿ ದೂರಾಗಿದ್ದಾರೆ. ಸುರೇಶ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ತ್ರಿವಿಕ್ರಮ್ ಮತ್ತು ಚೈತ್ರಾ ಜೈಲಿಗೆ ಹೋಗಿರುವುದು ಮಾತ್ರವೇ ಅಲ್ಲದೆ. ಈಗ ಎಲ್ಲ ಕಿವಿ ಹಿಂಡಲು ಬಂದಿದ್ದಾರೆ ಸುದೀಪ್.

ಮತ್ತೊಂದು ಶನಿವಾರ ಬಂದಿದೆ, ಬಿಗ್​ಬಾಸ್ ವೇದಿಕೆಗೆ ಮತ್ತೆ ಬಂದಿದ್ದಾರೆ ಕಿಚ್ಚ ಸುದೀಪ್. ಈ ವಾರ ಬಿಗ್​ಬಾಸ್ ಮನೆಯಲ್ಲಿ ಹಲವು ಘಟನೆಗಳು ನಡೆದಿವೆ. ರಜತ್, ಧನರಾಜ್​ ಮೇಲೆ ರೌಡಿಸಂ ತೋರಿಸಿದ್ದಾರೆ. ಉಗ್ರಂ ಮಂಜು ಹಾಗೂ ಗೌತಮಿ ದೂರಾಗಿದ್ದಾರೆ. ಸುರೇಶ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ತ್ರಿವಿಕ್ರಮ್ ಮತ್ತು ಚೈತ್ರಾ ಜೈಲಿಗೆ ಹೋಗಿರುವುದು ಮಾತ್ರವೇ ಅಲ್ಲದೆ. ಜೈಲಿಂದ ತಪ್ಪಿಸಿಕೊಂಡು ನಿಯಮ ಮುರಿದಿದ್ದಾರೆ. ಒಟ್ಟಾರೆ ಈ ವಾರ ಸಾಕಷ್ಟು ಘಟನೆಗಳು ನಡೆದಿವೆ, ಸುದೀಪ್​ಗೆ ತಿದ್ದಲು ಸಾಕಷ್ಟು ವಿಷಯಗಳು ಈ ವಾರ ಇವೆ. ಇದೀಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸುದೀಪ್, ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ದಾರಿ ತೋರಿಸುವ ಕಾರ್ಯ ಮಾಡೋಣ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More