ಐಶ್ವರ್ಯಾ, ಧರ್ಮ, ಅನುಷಾ ನಡುವಿನ ಲವ್ ಸ್ಟೋರಿ ಚರ್ಚೆ; ಹಳೇ ವಿಷಯ ತೆಗೆದ ಗೋಲ್ಡ್ ಸುರೇಶ್

|

Updated on: Oct 13, 2024 | 4:33 PM

ಬಿಗ್​ ಬಾಸ್​ ಮನೆಯಲ್ಲಿ ಪ್ರೀತಿ ಚಿಗುರುವುದು ಹೊಸದೇನೂ ಅಲ್ಲ. ಪ್ರತಿ ಸೀಸನ್​ನಲ್ಲೂ ಆ ರೀತಿಯ ಘಟನೆಗಳು ನಡೆಯುತ್ತವೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಐಶ್ವರ್ಯಾ ಸಿಂಧೋಗಿ, ಧರ್ಮ ಕೀರ್ತಿರಾಜ್​ ಹಾಗೂ ಅನುಷಾ ರೈ ನಡುವೆ ತ್ರಿಕೋನ ಪ್ರೇಮಕಥೆ ಶುರುವಾದಂತಿದೆ. ಈ ಬಗ್ಗೆ ‘ಸೂಪರ್​ ಸಂಡೇ ವಿತ್ ಸುದೀಪ’ ಸಂಚಿಕೆಯಲ್ಲಿ ಚರ್ಚೆ ಆಗಲಿದೆ.

ತಮಗೆ ಧರ್ಮ ಕೀರ್ತಿರಾಜ್​ ಇಷ್ಟ ಆಗಿದ್ದಾರೆ ಎಂದು ಐಶ್ವರ್ಯಾ ಸಿಂಧೋಗಿ ಈಗಾಗಲೇ ಹೇಳಿದ್ದಾರೆ. ಧರ್ಮ ಮತ್ತು ಅನುಷಾ ರೈ ಜೊತೆಯಲ್ಲಿ ಇದ್ದಾಗ ಐಶ್ವರ್ಯಾ ಬೇಸರ ಮಾಡಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಹಲವರಿಗೆ ಇದೆ. ಈ ವಿಷಯವನ್ನು ಭಾನುವಾರದ (ಅ.13) ಸಂಚಿಕೆಯಲ್ಲಿ ಕಿಚ್ಚ ಸುದೀಪ್​ ಚರ್ಚೆ ಮಾಡಲಿದ್ದಾರೆ. ಈ ನಡುವೆ ಗೋಲ್ಡ್​ ಸುರೇಶ್​ ಅವರು ಒಂದು ಹಳೇ ಲವ್​ ಸ್ಟೋರಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ತ್ರಿಕೋನ ಪ್ರೇಮಕಥೆಯ ಬಗ್ಗೆ ಐಶ್ವರ್ಯಾ, ಧರ್ಮ, ಅನುಷಾ ಅವರು ಸುದೀಪ್​ ಜೊತೆ ಮಾತನಾಡಿದ್ದಾರೆ. ಅದರ ಪ್ರೋಮೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on