AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಬೆಂಬಲ ನೋಡಿ ಪ್ರತಾಪ್​ನ ತಮ್ಮ ಎಂದು ಸ್ವೀಕರಿಸಿದ್ರಾ ಸಂಗೀತಾ? ಖಡಕ್ ಪ್ರಶ್ನೆಗೆ ನೇರ ಉತ್ತರ

ಜನಬೆಂಬಲ ನೋಡಿ ಪ್ರತಾಪ್​ನ ತಮ್ಮ ಎಂದು ಸ್ವೀಕರಿಸಿದ್ರಾ ಸಂಗೀತಾ? ಖಡಕ್ ಪ್ರಶ್ನೆಗೆ ನೇರ ಉತ್ತರ

ರಾಜೇಶ್ ದುಗ್ಗುಮನೆ
|

Updated on:Jan 22, 2024 | 8:53 AM

Share

ಬಿಗ್ ಬಾಸ್ ಮನೆಗೆ ಕಿರಿಕ್ ಕೀರ್ತಿ ಹಾಗೂ ಜಾಹ್ನವಿ ಅತಿಥಿಗಳಾಗಿ ಬಂದಿದ್ದಾರೆ. ಸ್ಪರ್ಧಿಗಳಿಗೆ ಖಡಕ್ ಪ್ರಶ್ನೆಗಳನ್ನು  ಕೇಳಲಾಗಿದೆ. ಪ್ರಶ್ನೆಗಳ ಸುರಿಮಳೆ ನೋಡಿ ಸ್ಪರ್ಧಿಗಳು ಕಂಗಾಲಾಗಿದ್ದಾರೆ.

ಬಿಗ್ ಬಾಸ್ ಫಿನಾಲೆ ವೀಕ್ ಆರಂಭ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸೀಸನ್ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಮನೆಗೆ ಕಿರಿಕ್ ಕೀರ್ತಿ ಹಾಗೂ ಜಾಹ್ನವಿ ಅತಿಥಿಗಳಾಗಿ ಬಂದಿದ್ದಾರೆ. ಸ್ಪರ್ಧಿಗಳಿಗೆ ಖಡಕ್ ಪ್ರಶ್ನೆಗಳನ್ನು  ಕೇಳಲಾಗಿದೆ. ಪ್ರಶ್ನೆಗಳ ಸುರಿಮಳೆ ನೋಡಿ ಸ್ಪರ್ಧಿಗಳು ಕಂಗಾಲಾಗಿದ್ದಾರೆ. ‘ಪ್ರತಾಪ್​ಗೆ ಸಾಕಷ್ಟು ಜನ ಬೆಂಬಲ ಇದೆ. ಇದನ್ನು ನೋಡಿ ಪ್ರತಾಪ್ ಜೊತೆ ಬಾಂಡಿಂಗ್ ಬೆಳೆಸಿಕೊಂಡಿದ್ರಾ’ ಎಂದು ಜಾಹ್ನವಿ ಅವರು ಕೇಳಿದ್ದಾರೆ. ‘ಈ ರೀತಿ ಸ್ಟ್ರಾಟಜಿ ಮಾಡಿಲ್ಲ’ ಎಂದರು ಸಂಗೀತಾ (Sangeetha Sringeri). ‘ನಿಮ್ಮನ್ನು ಬೆಂಬಲಿಸವರು ಮನೆಯ ಹೊರಗಿದ್ದಾರೆ’ ಎಂದು ಕಿರಿಕ್ ಕೀರ್ತಿ ಅವರು ವಿನಯ್​ಗೆ ಕೇಳಿದರು. ಕಲರ್ಸ್ ಕನ್ನಡದಲ್ಲಿ ಈ ಎಪಿಸೋಡ್ ಇಂದು (ಜನವರಿ 22) ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 22, 2024 08:51 AM
Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More