ಅಯೋಧ್ಯೆಯಲ್ಲಿ ಮನೆ ಮಾಡಿದ ಸಂಭ್ರಮ; ಹೇಗಿದೆ ನೋಡಿ ಸಿದ್ಧತೆ
ಅಯೋಧ್ಯೆ ಕೇಸರಿ ಮಯವಾಗಿದೆ. ರಾಮಮಂದಿರ ಎದುರು ಭಕ್ತರು ಜಮಾಯಿಸಿದ್ದಾರೆ. ಕಲಾ ತಂಡಗಳು ನೃತ್ಯ ಪ್ರದರ್ಶಿಸಿ ರಾಮನನ್ನು ಭಜಿಸುತ್ತಿವೆ. ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಪ್ರಧಾನಿ ಮೋದಿ ಮಧ್ಯಾಹ್ನ 12.55ಕ್ಕೆ ಹೆಲಿಕಾಪ್ಟರ್‌ನಿಂದ ರಾಮಮಂದಿರದ ಮೇಲೆ ಪುಷ್ಪವೃಷ್ಟಿಯನ್ನು ಮಾಡಲಿದ್ದಾರೆ.
ಅಯೋಧ್ಯೆ, ಜ.22: ಅಯೋಧ್ಯೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ (Ayodhya Ram Mandir). ಬೆಳಗ್ಗೆ 11ಗಂಟೆಯಿಂದ 12ರವರೆಗೆ ರಾಮ ಮಂದಿರ ವೀಕ್ಷಣೆ, ರಾಮಜನ್ಮಭೂಮಿ ಆವರಣದಲ್ಲಿ ಪ್ರಧಾನಿ ಮೋದಿ ಸಂಚರಿಸಲಿದ್ದಾರೆ. ನಂತರ ಮಧ್ಯಾಹ್ನ 12.05ರಿಂದ 12.55ರವರೆಗೆ ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12:20 ಕ್ಕೆ ಬಾಲರಾಮನ ಕಣ್ಣಿಗೆ ಕಟ್ಟಿರುವ ಬಟ್ಟೆ ತೆಗೆಯಲಿದ್ದಾರೆ. ಕಣ್ಣಿಗೆ ಕಟ್ಟಿರುವ ಬಟ್ಟೆ ತೆರೆದ ಬಳಿಕ ಕಣ್ಣಿಗೆ ಕಾಡಿಗೆಯನ್ನು ಹಚ್ಚಲಿದ್ದಾರೆ.
ರಾಮಲಲ್ಲಾನ ಕಣ್ಣಿಗೆ ಕಾಡಿಗೆಯನ್ನು ಹಚ್ಚಿದ ಬಳಿಕ ಮಧ್ಯಾಹ್ನ 12.25ಕ್ಕೆ ರಾಮಲಲ್ಲಾನಿಗೆ ಕನ್ನಡಿಯನ್ನು ತೋರಿಸಲಿದ್ದಾರೆ. ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಪ್ರಧಾನಿ ಮೋದಿ ಮಧ್ಯಾಹ್ನ 12.55ಕ್ಕೆ ಹೆಲಿಕಾಪ್ಟರ್‌ನಿಂದ ರಾಮಮಂದಿರದ ಮೇಲೆ ಪುಷ್ಪವೃಷ್ಟಿಯನ್ನು ಮಾಡಲಿದ್ದಾರೆ. ಮೋದಿ ಅವರು ಪ್ರಭು ರಾಮನ ಮೊದಲ ದರ್ಶನ ಪಡೆದ ನಂತರ, ಮಧ್ಯಾಹ್ನ 1 ಗಂಟೆಯಿಂದ ಇತರ ಭಕ್ತರಿಗೆ ಅವಕಾಶ ದೊರೆಯಲಿದೆ. ಅಯೋಧ್ಯೆ ಕೇಸರಿ ಮಯವಾಗಿದೆ. ರಾಮಮಂದಿರ ಎದುರು ಭಕ್ತರು ಜಮಾಯಿಸಿದ್ದಾರೆ. ಕಲಾ ತಂಡಗಳು ನೃತ್ಯ ಪ್ರದರ್ಶಿಸಿ ರಾಮನನ್ನು ಭಜಿಸುತ್ತಿವೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ