ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ

Updated on: Sep 18, 2026 | 3:27 PM

ಬಿಗ್ ಬಾಸ್ ಮನೆಯ ಟಾಸ್ಕ್ ಒಂದರಲ್ಲಿ ಬಜರ್ ಒತ್ತುವ ವಿಚಾರಕ್ಕೆ ದೊಡ್ಡ ಗಲಾಟೆ ನಡೆದಿದೆ. ಸಂಚಾಲಕಿ ವೈಷ್ಣವಿ ನೀಡಿದ ತೀರ್ಪನ್ನು ಪ್ರಶ್ನಿಸಿದ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್, ತಾವೇ ಮೊದಲು ಬಜರ್ ಒತ್ತಿದ್ದಾಗಿ ಆಕ್ರೋಶದ ವಾದ ಮಂಡಿಸಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಇದು ಹಲವು ಚರ್ಚೆ ಹುಟ್ಟುಹಾಕಿದೆ. 

ಬಿಗ್ ಬಾಸ್ ಕನ್ನಡ ಮನೆ ಆಟ ಮತ್ತು ಗಲಾಟೆಗಳಿಗೆ ಹೆಸರುವಾಸಿಯಾಗಿದೆ. ಇದೀಗ ಹೊಸ ಪ್ರೋಮೋ ಹೊರಬಿದ್ದಿದ್ದು, ಟಾಸ್ಕ್ ಒಂದರಲ್ಲಿ ಸಂಚಾಲಕರ ನಿರ್ಧಾರವೇ ದೊಡ್ಡ ಗೊಂದಲ ಹಾಗೂ ಮಾತಿನ ಚಕಮಕಿಗೆ ಕಾರಣವಾಗಿದೆ. ಅಲ್ಲದೆ, ಗಗನ್ ಚಿನ್ನಪ್ಪ ಅವರ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಗಗನ್ ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. ಅಲ್ಲದೆ, ಉಸ್ತುವಾರಿಯ ನಿರ್ಧಾರ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಸ್ತುವಾರಿ ವೈಷ್ಣವಿ ಅವರು ಜಗದೀಶ್ ಬಂದು ಬಜರ್ ಒತ್ತಿದರು ಎಂದು ಘೋಷಿಸಿದ್ದಾರೆ. ಆದರೆ, ಇದಕ್ಕೆ ಒಪ್ಪದ ಗಗನ್ ಚಿನ್ನಪ್ಪ ತಾವು ಮೊದಲು ಬಜರ್ ಒತ್ತಿದ್ದಾಗಿ ಪ್ರಬಲವಾಗಿ ವಾದಿಸಿದ್ದಾರೆ.

‘ನಾನು ಯಾವತ್ತೂ ಗೇಮ್‌ನಲ್ಲಿ ಮೋಸ ಮಾಡಲ್ಲ’ ಎಂದು ಗಗನ್ ಕಿರುಚಾಡುತ್ತಾ ತಮ್ಮ ಪಾಯಿಂಟ್‌ ಅನ್ನು ಸಮರ್ಥಿಸಿಕೊಂಡರು. ಆ ಬಳಿಕ ತಾಂಡವ್ ಮೊದಲು ಬಜರ್ ಒತ್ತಿದ್ದರು. ಈ ವೇಳೆ ವೈಷ್ಣವಿ, ಗಗನ್ ಚಿನ್ನಪ್ಪ ಮೊದಲು ಬಜರ್ ಒತ್ತಿದ್ದು ಎಂದರು. ಆಗ ಗಗನ್ ಸೈಲೆಂಟ್ ಆಗಿ ಇದ್ದರು. ಇದು ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More