ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್

Updated on: Dec 19, 2024 | 3:48 PM

Bigg Boss Kannada: ಬಿಗ್​ಬಾಸ್ ಕನ್ನಡದಲ್ಲಿ ದಿನಗಳ ಕಳೆದಂತೆ ಶೋ ಕುತೂಹಲಕಾರಿ ಆಗುತ್ತಾ ಸಾಗುತ್ತಿದೆ. ರಜತ್ ಮತ್ತು ಮೋಕ್ಷಿತಾ ಅವರುಗಳು ಭವ್ಯಾ ಹಾಗೂ ಉಗ್ರಂ ಮಂಜು ಅವರು ಆಡುತ್ತಿರುವ ರೀತಿ ಅವರ ವ್ಯಕ್ತಿತ್ವವನ್ನು ಟೀಕಿಸಿ ಇಬ್ಬರನ್ನು ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ...

ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ಆಟ ಜೋರಾಗಿ ನಡೆದಿದೆ. ಸ್ಪರ್ಧಿಗಳು ಬಿಗ್​ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಶಕ್ತಿಮೀರಿ ಪ್ರದರ್ಶನ ಮಾಡುತ್ತಿದ್ದಾರೆ. ಇದರ ಜೊತೆಗೆ ಮತ್ತೊಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸುವ ಪ್ರಯತ್ನವನ್ನೂ ಸಹ ಮಾಡುತ್ತಿದ್ದಾರೆ. ಇದೀಗ ಮನೆಯಲ್ಲಿ ರಜತ್ ಮತ್ತು ಮೋಕ್ಷಿತಾ ಅವರುಗಳು ಉಗ್ರಂ ಮಂಜು, ಭವ್ಯಾ ಗೌಡ ಇನ್ನಿತರೆ ಸ್ಪರ್ಧಿಗಳು ಆಡುತ್ತಿರುವ ರೀತಿಯನ್ನು ಟೀಕಿಸಿ ಅವರನ್ನು ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ್ದಾರೆ. ರಜತ್ ಹಾಗೂ ಮೋಕ್ಷಿತಾ ಅವರ ಮಾತುಗಳಿಗೆ ವಿರೋಧವನ್ನು ಸಹ ಸ್ಪರ್ಧಿಗಳು ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More