ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು

Updated on: Dec 15, 2024 | 1:56 PM

Bigg Boss Kannada season 11: ಭಾನುವಾರದ ಎಪಿಸೋಡ್​ನಲ್ಲಿ, ಪರಸ್ಪರರ ಮೇಲಿನ ಸಿಟ್ಟು ತೀರಿಸಿಕೊಳ್ಳುವ ಅವಕಾಶವನ್ನು ಸುದೀಪ್, ಮನೆಯ ಸ್ಪರ್ಧಿಗಳಿಗೆ ನೀಡಿದ್ದರು. ಬಾಕ್ಸಿಂಗ್ ಬ್ಯಾಗ್​ಗೆ ತಮಗೆ ಆಗದವರ ಚಿತ್ರವನ್ನು ಅಂಟಿಸಿ, ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡು ಗುದ್ದಬೇಕಿತ್ತು. ಹೆಚ್ಚು ಏಟು ಬಿದ್ದಿದ್ದು ರಜತ್ ಮತ್ತು ಉಗ್ರಂ ಮಂಜುಗೆ. 

ಬಿಗ್​ಬಾಸ್ ಮನೆಯಲ್ಲಿ ಮೇಲ್ನೋಟಕ್ಕೆ ಗೆಳೆಯರಂತೆ ಇದ್ದರೂ ಸಹ ಒಳಗೆ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಬಹಳ ಸಿಟ್ಟು, ಆಕ್ರೋಶ ಇದೆ. ಭಾನುವಾರದ ಎಪಿಸೋಡ್​ನಲ್ಲಿ, ಪರಸ್ಪರರ ಮೇಲಿನ ಸಿಟ್ಟು ತೀರಿಸಿಕೊಳ್ಳುವ ಅವಕಾಶವನ್ನು ಸುದೀಪ್, ಮನೆಯ ಸ್ಪರ್ಧಿಗಳಿಗೆ ನೀಡಿದ್ದರು. ಬಾಕ್ಸಿಂಗ್ ಬ್ಯಾಗ್​ಗೆ ತಮಗೆ ಆಗದವರ ಚಿತ್ರವನ್ನು ಅಂಟಿಸಿ, ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡು ಗುದ್ದಬೇಕಿತ್ತು. ಹೆಚ್ಚು ಏಟು ಬಿದ್ದಿದ್ದು ರಜತ್ ಮತ್ತು ಉಗ್ರಂ ಮಂಜುಗೆ. ಉಗ್ರಂ ಸಹ ಬಹಳ ಸಿಟ್ಟಿನಿಂದಲೇ ಬಾಕ್ಸಿಂಗ್​ ಬ್ಯಾಗ್​ಗೆ ಹೊಡೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More