‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ

Updated on: Nov 15, 2024 | 2:41 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ಈ ವಾರದ ಟಾಸ್ಕ್​ನಲ್ಲಿ ಹನುಮಂತು ಹಾಗೂ ಗೌತಮಿ ಜೋಡಿಯಾಗಿದ್ದಾರೆ. ಗೌತಮಿ ಅಳುತ್ತಾ ಹನುಮಂತು ಬಳಿ ಕ್ಷಮೆ ಕೇಳಿದ್ದಾರೆ. ಹನುಮಂತು ತೆರೆದ ಹೃದಯದಿಂದ ಕ್ಷಮಿಸಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರದ ಆರಂಭದಿಂದಲೂ ಜೋಡಿ ಟಾಸ್ಕ್ ನಡೆಯುತ್ತಿದೆ. ಹನುಮಂತಿ ಹಾಗೂ ನಟಿ ಗೌತಮಿ ಜೋಡಿ ಆಗಿದ್ದರು. ಆದರೆ ಜೋಡಿ ಬದಲಿಸಿಕೊಳ್ಳುವ ಅವಕಾಶ ಸಿಕ್ಕಾಗ ಗೌತಮಿ, ಹನುಮಂತನ ಬದಲಿಗೆ ತ್ರಿವಿಕ್ರಮ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ತ್ರಿವಿಕ್ರಮ್ ಭವ್ಯಾ ಅನ್ನು ಆಯ್ಕೆ ಮಾಡಿಕೊಂಡ. ಆದರೆ ಅವರ ವಿರುದ್ಧವೇ ಆಡಿ ಗೌತಮಿ ಹಾಗೂ ಹನುಮಂತ ಟಾಸ್ಕ್ ಆಡಿ ಗೆದ್ದಿದ್ದಾರೆ. ಆದರೆ ತಾನು ಹನುಮಂತು ಬದಲಿಗೆ ತ್ರಿವಿಕ್ರಮ್ ಅನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದ ಬಗ್ಗೆ ಗೌತಮಿಗೆ ಬೇಸರ ಮೂಡಿದೆ. ಹನುಮಂತು ಬಳಿ ಈ ಬಗ್ಗೆ ಕ್ಷಮೆ ಸಹ ಕೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More