ಬಿಗ್​ಬಾಸ್: ಹನುಮಂತನಿಗೆ ಸಾಕಾಗಿದೆ ಕ್ಯಾಪ್ಟನ್ಸಿ ರಗಳೆ

|

Updated on: Nov 06, 2024 | 3:31 PM

ಬಿಗ್​ಬಾಸ್ ಕನ್ನಡ ಸೀಸನ್ 11: ಹನುಮಂತು ಮನೆಯ ಕ್ಯಾಪ್ಟನ್ ಆಗಿದ್ದಾನೆ. ಆದರೆ ಪಾಪ ಹನುಮಂತು ಮನೆಯ ಕ್ಯಾಪ್ಟನ್ ಆದಾಗಿನಿಂದಲೂ ಟಾಸ್ಕ್ ವಿಷಯದಲ್ಲಿ ಮನೆಯ ಸದಸ್ಯರು ಹನುಮಂತು ಜೊತೆ ಜಗಳ ಮಾಡುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಈಗ ಹನುಮಂತನಿಗೆ ಕ್ಯಾಪ್ಟೆನ್ಸಿ ಸಾಕಾಗಿದೆ.

ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಆರಂಭದ ಎರಡು ವಾರ ಬರೀ, ಜಗಳ ಗಲಾಟೆಗಳೇ ತುಂಬಿದ್ದವು. ಆದರೆ ಇತ್ತೀಚೆಗೆ ತುಸು ಬದಲಾವಣೆ ಆಗುತ್ತಿದೆ. ಸ್ಪರ್ಧಿಗಳು ಟಾಸ್ಕ್ ಬಗ್ಗೆ ಹೆಚ್ಚು ಗಮನವಹಿಸುತ್ತಿದ್ದಾರೆ. ಹನುಮಂತನ ಎಂಟ್ರಿಯಿಂದ ಮನೆಯಲ್ಲಿ ಕೆಲ ಬದಲಾವಣೆಗಳು ಸಹ ಆಗಿವೆ. ಕಳೆದ ವಾರ ಟಾಸ್ಕ್​ನಲ್ಲಿ ಗೆದ್ದು ಕ್ಯಾಪ್ಟನ್ ಆಗಿರುವ ಹನುಮಂತು. ಮನೆಯಲ್ಲಿ ನಿಭಾಯಿಸುವಷ್ಟರಲ್ಲಿ ಹೈರಾಣಾಗುತ್ತಿದ್ದಾರೆ. ಹನುಮಂತನ ಕ್ಯಾಪ್ಟನ್ಸಿಯಲ್ಲಿ ಟಾಸ್ಕ್​ಗಳು ನ್ಯಾಯಯುತವಾಗಿ ನಡೆಯುತ್ತಿಲ್ಲ ಎಂದು ಆರೋಪಗಳನ್ನು ಮನೆ ಮಂದಿ ಮಾಡುತ್ತಿದ್ದಾರೆ. ಚೈತ್ರಾ ಸೇರಿದಂತೆ ಹಲವರು ಹನುಮನ ಮೇಲೆ ಜಗಳ ಮಾಡಿದ್ದಾರೆ. ಇದರಿಂದ ಹೈರಾಣಾಗಿರುವ ಹನುಮಂತ ನನಗೆ ಕ್ಯಾಪ್ಟೆನ್ಸಿ ಬೇಡ ಎನ್ನುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ