ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ ಮಾಡಲಾಗಿದೆ. ಸ್ವರ್ಗದಲ್ಲಿ ಇರುವವರಿಗೆ ಎಲ್ಲಾ ಸೌಕರ್ಯ ಸಿಗುತ್ತಿದೆ. ನರಕದಲ್ಲಿ ಇರುವವರಿಗೆ ಸಾಮಾನ್ಯ ಸೌಲಭ್ಯ ಮಾತ್ರ ಒದಗಿಸಲಾಗುತ್ತಿದೆ. ಎರಡೂ ಗುಂಪಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಆಡುವಾಗ ಅವಘಡ ಸಂಭವಿಸಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಒಂದು ಟಾಸ್ಕ್ ನೀಡಲಾಗಿದೆ. ಮನೆಯವರೆಲ್ಲರೂ ಒಟ್ಟಾಗಿ ಆಡುತ್ತಿರುವ ಮೊದಲ ಟಾಸ್ಕ್ ಇದು ಎಂದೇ ಹೇಳಬಹುದು. ಈ ಕಾರಣಕ್ಕೋ ಏನೋ ಎಲ್ಲರೂ ಮೃಗಗಳಂತೆ ವರ್ತಿಸಿದ್ದಾರೆ. ಸ್ಪರ್ಧಿಗಳ ಮಧ್ಯೆ ಕಿರಿಕ್ ಆಗಿದೆ. ತ್ರಿವಿಕ್ರಂ ಹಾಗೂ ಗೋಲ್ಡ್ ಸುರೇಶ್ಗೆ ಗಾಯಗಳಾಗಿವೆ. ಈ ವಿಚಾರಕ್ಕೆ ಸಂಬಂಧಿಸಿ ಬಿಗ್ ಬಾಸ್ ನೀತಿ ಪಾಠ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos