‘ನಿನ್ನತ್ರ ಇರೋ ಎರಡು ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕೆಂಬ ಆಸೆ ಇದೆ’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು

|

Updated on: Jan 21, 2025 | 8:16 AM

ಇದು ಫಿನಾಲೆ ವಾರ. ಈ ವಾರ ಯಾವುದೇ ಟಾಸ್ಕ್​ಗಳನ್ನು ಬಿಗ್ ಬಾಸ್ ನೀಡುವುದಿಲ್ಲ. ಹೀಗಾಗಿ, ನಾನಾ ರೀತಿಯ ಚಟುವಟಿಕೆಗಳನ್ನು ಬಿಗ್ ಬಾಸ್ ನೀಡುತ್ತಾ ಇದ್ದಾರೆ. ಅದೇ ರೀತಿ ಫಿನಾಲೆ ವಾರದ ಎರಡನೇ ದಿನ ಬಿಗ್ ಬಾಸ್ ಚಟುವಟಿಕೆ ಒಂದನ್ನು ನೀಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚಟುವಟಿಕೆ ಒಂದನ್ನು ನೀಡಲಾಗಿದೆ. ಟ್ರೋಫಿಯನ್ನು ನೋಡಿ ಮನದಾಳದ ಮಾತನ್ನು ಸ್ಪರ್ಧಿಗಳು ಹೇಳಬೇಕು. ಈ ವೇಳೆ ಹನುಮಂತ ಅವರು ‘ಯವ್ವಾ ಗರುಡವ್ವ’ ಎಂದಿದ್ದಾರೆ. ಟ್ರೋಫಿ ಗರುಡ ದೇವತೆ ಅಂತೆ ಕಂಡಿದೆ. ತ್ರಿವಿಕ್ರಂ ಅವರಿಗೆ ಕಪ್ ಗೆದ್ದರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎನಿಸಿದೆ. ‘ನಿನ್ನತ್ರ ಇರೋ ಎರಡು ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕೆಂಬ ಆಸೆ ಇದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.