ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭವಾಗದ್ದು, ಆರಂಭವಾದಾಗಿನಿಂದಲೂ ಜಗಳಗಳೇ ನಡೆಯುತ್ತಿವೆ. ಸ್ಪರ್ಧಿಗಳು ಬಿಡುವು ಕೊಡದಂತೆ ಒಬ್ಬರ ಮೇಲೊಬ್ಬರು ಜಗಳ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಲಾಯರ್ ಜಗದೀಶ್, ಧನರಾಜ್ ಆಚಾರ್ ಮೇಲೆ ಹರಿಹಾಯ್ದಿದ್ದಾರೆ.
ಬಿಗ್ಬಾಸ್ ಸೀಸನ್ 11 ಆರಂಭವಾಗಿದೆ. ಈ ಬಾರಿ ಬಿಗ್ಬಾಸ್ ಮನೆಗೆ ಬಂದಿರುವ ಸದಸ್ಯರು, ನಾವು ಬಂದಿರುವುದೇ ಜಗಳವಾಡಲು ಎಂದು ನಿರ್ಧರಿಸಿಯೇ ಮನೆ ಒಳಗೆ ಕಾಲಿಟ್ಟಂತಿದೆ. ಒಬ್ಬರ ಮೇಲೊಬ್ಬರು ಹಾರಿ ಬೀಳುತ್ತಿದ್ದಾರೆ, ಜಗಳ ಆಡುವುದರಲ್ಲಿ, ದ್ವೇಷ ಸಾಧಿಸುವುದರಲ್ಲಿ ಯಾರು ಮೇಲೆಂದು ಸ್ಪರ್ಧೆಗೆ ಬಿದ್ದವರಂತೆ ಒಬ್ಬರ ಮೇಲೊಬ್ಬರು ಜಗಳ ಮಾಡುತ್ತಿದ್ದಾರೆ. ಬಿಗ್ಬಾಸ್ ಆರಂಭವಾದಾಗಿನಿಂದ ಲಾಯರ್ ಜಗದೀಶ್ ಸಖತ್ ಸದ್ದು ಮಾಡುತ್ತಿದ್ದಾರೆ. ಹೊರಗಿದ್ದಾಗಲೂ ಸಾಮಾಜಿಕ ಜಾಲತಾಣದ ವಿಡಿಯೋಗಳಲ್ಲಿ ಭರ್ಜರಿ ಡೈಲಾಗ್ಗಳನ್ನು ಹೊಡೆಯುತ್ತಾ ಸದ್ದು ಮಾಡುತ್ತಿದ್ದ ಜಗದೀಶ್ ಈಗ ಬಿಗ್ಬಾಸ್ನಲ್ಲೂ ಅದೇ ಮುಂದುವರೆಸಿದ್ದಾರೆ. ಇದೀಗ ಜಗದೀಶ್, ಧನರಾಜ್ ವಿರುದ್ಧ ಹರಿಹಾಯ್ದಿದ್ದಾರೆ. ಪಿಕ್ಚರ್ ಅಭಿ ಬಾಕಿ ಹೇ ಎಂದು ಬೆದರಿಕೆ ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ