ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್
ಗಾಂಧಿ ನಡಿಗೆ ಕಾರ್ಯಕ್ರಮ ಹಿನ್ನೆಲಯಲ್ಲಿ ಗಾಂಧಿ ಭವನಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಾಂಧಿ ಟೋಪಿ ಹಾಕಿ ಗೌರವಿಸಿದರು. ಬಳಿಕ ಸಚಿವ ಹೆಚ್ಕೆ ಪಾಟೀಲ್ ತ್ರಿವರ್ಣ ಧ್ವಜದ ಹಾರ ಹಾಕಿ ಸನ್ಮಾನಿಸಿದರು.
ಗಾಂಧಿ ಜಯಂತಿ (Gandhi Jayanti) ಮತ್ತು ಕಾಂಗ್ರೆಸ್ ಪಕ್ಷಕ್ಕೆ ಗಾಂಧೀಜಿ ಅಧ್ಯಕ್ಷತೆಗೆ 100 ವರ್ಷಗಳ ಸಂಭ್ರಮ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ “ಗಾಂಧಿ ನಡಿಗೆ” ಕಾರ್ಯಕ್ರಮ ನಡೆಸಿತು. ಗಾಂಧಿ ನಡಿಗೆ ಗಾಂಧಿ ಭವನವಾಗಿ ವಿಧಾನಸೌಧದಲ್ಲಿ ಅಂತ್ಯವಾಯ್ತು. ಗಾಂಧಿ ನಡಿಗೆ ಸಂಬಂಧ ಗಾಂಧಿ ಭವನಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಾಂದಿ ಟೋಪಿ ಹಾಕಿ ಸ್ವಾಗತಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ