ಸುದೀಪ್ ಎದುರಲ್ಲಿ ಅಶ್ವಿನಿ ಗೌಡಗೆ ಡವ್ ರಾಣಿ ಎಂದ ಬಿಗ್ ಬಾಸ್ ಸ್ಪರ್ಧಿಗಳು
‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ ಸ್ಪರ್ಧಿ ಆಗಿದ್ದಾರೆ. ಅವರ ಆಟ ಹಲವರಿಗೆ ಇಷ್ಟ ಆಗಿದೆ. ಆದರೆ ಈಗ ಅವರಿಗೆ ಡವ್ ರಾಣಿ ಎಂಬ ಪಟ್ಟವನ್ನು ಕಟ್ಟಲಾಗಿದೆ. ಭಾನುವಾರದ (ಅ.12) ಸಂಚಿಕೆಯಲ್ಲಿ ಈ ಸಂಗತಿ ನಡೆದಿದೆ.
ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಸ್ಪರ್ಧಿ ಆಗಿದ್ದಾರೆ. ಅವರ ಆಟ ಹಲವರಿಗೆ ಇಷ್ಟ ಆಗಿದೆ. ಆದರೆ ಅವರಿಗೆ ಡವ್ ರಾಣಿ ಎಂಬ ಪಟ್ಟ ಕಟ್ಟಲಾಗಿದೆ. ಭಾನುವಾರದ (ಅಕ್ಟೋಬರ್ 12) ಸಂಚಿಕೆಯಲ್ಲಿ ಈ ಸಂಗತಿ ನಡೆದಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಸ್ಪರ್ಧಿಗಳ ಜೊತೆ ಮಾತನಾಡುವಾಗ ಈ ವಿಷಯ ಪ್ರಸ್ತಾಪ ಆಗಿದೆ. ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಷ್ಟಕ್ಕೂ ಅಶ್ವಿನಿ ಗೌಡ (Ashwini Gowda) ಅವರಿಗೆ ಡವ್ ರಾಣಿ ಎಂಬ ಪಟ್ಟ ಕಟ್ಟಿದ್ದಕ್ಕೆ ಸ್ಪರ್ಧಿಗಳು ನೀಡಿದ ಕಾರಣ ಏನು ಎಂಬುದನ್ನು ತಿಳಿಯಲು ಪೂರ್ತಿ ಸಂಚಿಕೆ ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
