ಪ್ರತಾಪ್ ಸಿಂಹ ಯಾರು?: MLC ಡಾ. ಯತೀಂದ್ರ ಸಿದ್ದರಾಮಯ್ಯ ಗರಂ
ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಯತೀಂದ್ರ, ರಾಜಕೀಯದಲ್ಲಿ ಪ್ರಸಿದ್ಧರಾಗಬೇಕೆಂದು ಆಧಾರ ಇಲ್ಲದೆ, ಸಾಕ್ಷಿ ಇಲ್ಲದೆ ಆರೋಪ ಮಾಡುತ್ತಾರೆ. ಬಿಜೆಪಿಯವರೇ ಪ್ರತಾಪ್ ಸಿಂಹರನ್ನು ಗಂಭೀರವಾಗಿ ಪರಿಗಣಿಸದ ಕಾರಣ, ಅವರ ಆರೋಪವನ್ನ ನಾವ್ಯಾಕೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ರಾಯಚೂರು, ಅಕ್ಟೋಬರ್ 12: ಸಿಎಂ ಸಿದ್ದರಾಮಯ್ಯ ಪುತ್ರ ರಾಜ್ಯ ಸರ್ಕಾರದ ವರ್ಗಾವಣೆ ಸಚಿವ ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿಕೆಗೆ MLC ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಪ್ರತಾಪ್ ಸಿಂಹ ಯಾರು ಎಂದು ಪ್ರಶ್ನಿಸಿರುವ ಯತೀಂದ್ರ, ರಾಜಕೀಯದಲ್ಲಿ ಪ್ರಸಿದ್ಧರಾಗಬೇಕೆಂದು ಆಧಾರ ಮತ್ತು ಸಾಕ್ಷಿ ಇಲ್ಲದೆ ಆರೋಪ ಮಾಡುತ್ತಾರೆ. ಬಿಜೆಪಿಯವರೇ ಪ್ರತಾಪ್ ಸಿಂಹರನ್ನು ಗಂಭೀರವಾಗಿ ಪರಿಗಣಿಸದ ಕಾರಣ, ಅವರ ಆರೋಪಕ್ಕೂ ಮಹತ್ವ ನೀಡಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 12, 2025 05:39 PM
